ದೊಡ್ಡಮಾಗರವಳ್ಳಿಗೆ ರಂಜಿತ್ ಅಧ್ಯಕ್ಷ

ald gp
ದೊಡ್ಡಮಾಗರವಳ್ಳಿ ಗ್ರಾಪಂ ಅಧ್ಯಕ್ಷ ಡಿ.ಪಿ.ರಂಜಿತ್ ಅವರನ್ನು ಸನ್ಮಾನಿಸಲಾಯಿತು. ಕೌಶಿಕ್, ಪ್ರವೀಣ್, ನಂದಿನಿ, ಪದ್ಮಾವತಿ ಇತರರಿದ್ದರು.
Published on

ಆಲ್ದೂರು: ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಡಿ.ಪಿ.ರಂಜಿತ್ ಅವಿರೋಧವಾಗಿ ಆಯ್ಕೆಯಾದರು.

ಚೇತನ್‌ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಅಭಿನಂದನಾ ಸಮಾರಂಭದಲ್ಲಿ ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜ್ ಮಾತನಾಡಿ, ಗ್ರಾಪಂ ಸದಸ್ಯರಿಗೆ 2 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಗೌರವಧನ ಹೆಚ್ಚಿಸಬೇಕು. ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷ ರಂಜಿತ್ ಮಾತನಾಡಿ, ಅನುದಾನ ಇಲ್ಲದೆ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ ಎಂದರು. ಗ್ರಾಪಂ ಉಪಾಧ್ಯಕ್ಷ ಕೌಶಿಕ್, ದೊಡ್ಡಮಾಗರವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸುದರ್ಶನ್, ಆಲ್ದೂರು ವಿಎಎಸ್‌ಎಎಸ್‌ಎನ್ ನಿರ್ದೇಶಕ ಕವೀಶ್, ಜೆಡಿಎಸ್ ಮುಖಂಡ ಪ್ರವೀಣ್, ನಂದಿನಿ, ಮೇಘ್ನಾ, ಪದ್ಮಾವತಿ, ಪೂರ್ಣೇಶ್, ರಾಜು, ಲೋಕೇಶ್, ತಿರುಪತಿ ನಾಯ್ಕ, ದೊಡ್ಡಯ್ಯ, ನಾರಾಯಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net