ದೊಡ್ಡಬಳ್ಳಾಪುರದಲ್ಲಿ ಜೇಮ್ಸ್ ಹಬ್ಬ, ನೂರಾರು ಅಭಿಮಾನಿಗಳಿಂದ ರಕ್ತದಾನ

17dbp3 WEB 2
Published on

ದೊಡ್ಡಬಳ್ಳಾಪುರ: ಚಿತ್ರ ಮಂದಿರಗಳ ಮುಂಭಾಗ ಡೊಳ್ಳುಕುಣಿತ ಸೇರಿ ವಿವಿದ ಸಾಂಸ್ಕೃತಿಕ ವೈಭವನಕ್ಕೆ ದೊಡ್ಡಬಳ್ಳಾಪುರ ಗುರುವಾರ ಜೇಮ್ಸ್ ಚಿತ್ರ ಬಿಡುಗಡೆ ಸಂಭ್ರಮಕ್ಕೆ ಸಾಕ್ಷಿಯಾಯಿತು. ವಿವೇಕಾನಂದ ನಗರದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ಅಭಿಮಾನಿಗಳು ರಕ್ತದಾನ ಮಾಡಿದರು. ಕರ್ನಾಟಕ ರಾಜರತ್ನ ಪುನೀತ್‌ರಾಜಕುಮಾರ್ ಸೇವಾ ಟ್ರಸ್ಟ್ ವತಿಯಿಂದ ಡಾ.ರಾಜ್‌ಕುಮಾರ್ ವೃತ್ತದಿಂದ ಸೌಂದರ್ಯಮಹಲ್ ಚಿತ್ರಮಂದಿರದವರೆಗೆ ಡೊಳ್ಳುಕುಣಿತ ಸೇರಿ ವಿವಿಧ ಸಾಂಸ್ಕೃತಿಕ ನೃತ್ಯಗಳೊಂದಿಗೆ ಪುನೀತ್ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಉಚಿತ ಹೆರಿಗೆ: ದೊಡ್ಡಬಳ್ಳಾಪುರ ನಗರದ ಖಾಸಬಾಗ್‌ನಲ್ಲಿರುವ ಗಂಗಾ ನರ್ಸಿಂಗ್ ಹೋಂನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಇದರೊಂದಿಗೆ ಗರ್ಭಿಣಿಯರಿಗೆ ಉಚಿತ ಹೆರಿಗೆ ಸೇವೆ ಕಲ್ಪಿಸಲಾಗಿತ್ತು. ಪ್ರತಿ ವರ್ಷವೂ ಡಾ.ರಾಜ್ ಜನ್ಮ ದಿನಾಚರಣೆಗೆ ಪ್ರಯುಕ್ತ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದೇವೆ. ಮೊದಲ ಬಾರಿಗೆ ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಹೆರಿಗೆ ಹಾಗೂ ವಾರದ ಕಾಲ ಗರ್ಭಿಣಿಯರಿಗೆ ಉಚಿತ ಆರೋಗ್ಯ ಸೇವೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಗುರುವಾರ ಇಬ್ಬರಿಗೆ ಹೆರಿಗೆ ಮಾಡಿಸಲಾಗಿದೆ ಎಂದು ನರ್ಸಿಂಗ್‌ಹೋಂ ಸಂಸ್ಥಾಪಕ ಡಾ.ರಮೇಶ್‌ಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net