ದೊಡ್ಡಚೆಲ್ಲೂರು ಗ್ರಾಮಕ್ಕೆ ಸಾರಿಗೆ ಬಸ್

P PURA CHELLURUU 21 (1)
Published on

ಪರಶುರಾಮಪುರ: ಸಮೀಪದ ದೊಡ್ಡಚೆಲ್ಲೂರು ಗ್ರಾಮಕ್ಕೆ ಬುಧವಾರ ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಚಾಲಕ, ನಿರ್ವಾಹಕರಿಗೆ ಹೂಗುಚ್ಚ ನೀಡುವ ಮೂಲಕ ವಿಶೇಷವಾಗಿ ಸ್ವಾಗತಿಸಿ, ಪೂಜೆ ಸಲ್ಲಿಸಿ ಎಲ್ಲರಿಗೂ ಸಿಹಿ ಹಂಚಿದರು.

ಗ್ರಾಪಂ ಉಪಾಧ್ಯಕ್ಷ ಸಿ.ಪ್ರಸನ್ನಕುಮಾರ, ಮುಖಂಡರಾದ ರಾಘವೇಂದ್ರ, ಅನಿಲ್‌ಕುಮಾರ, ನಾಗರಾಜು, ಅಂಜಿನಪ್ಪ, ರೈತ ಸಂಘದ ಹೋಬಳಿ ಅಧ್ಯಕ್ಷ ನವೀನಗೌಡ, ತಾಲೂಕು ಉಪಾಧ್ಯಕ್ಷ ಜಂಪಣ್ಣ, ಕಾರ್ಯಾಧ್ಯಕ್ಷ ಜೆ.ಜೆ.ಗುಂಟೆ ಹನುಮಂತರಾಯ, ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ, ಜಿಲ್ಲಾ ಸಮಿತಿಯ ಪಿ.ಮಹದೇವಪುರ ವೆಂಕಟರಮಣಪ್ಪ, ಶಾಂತಪ್ಪ ಗೌಡ, ಹನುಮಂತರಾಯ, ನಿಂಗಣ್ಣ, ರಾಜು, ಅಣ್ಣಪ್ಪ, ನಾಗೇಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net