ಕುಣಿಗಲ್: ಪಟ್ಟಣದ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಕೊತ್ತಗೆರೆ ಹೋಬಳಿ ಸೊಬಗಾನಹಳ್ಳಿಯ ಸಾಪ್ ್ಟವೇರ್ ಉದ್ಯೋಗಿ ಸುಮಾ (25) ಮತದೇಹ ಶುಕ್ರವಾರ ಪತ್ತೆಯಾಗಿದೆ.ಗುರುವಾರ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ಹಿನ್ನೆಲೆಯಲ್ಲಿ ಸ್ಥಳಿಯ ಅಗ್ನಿಶಾಮಕ ದಳ ಶಾಸಕ ಡಾ.ಎಚ್.ಡಿ.ರಂಗನಾಥ್ ನೇತೃತ್ವದಲ್ಲಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.
ಶವ ಹೊರ ತೆಗೆದ ಈಶ್ವರ್ ಮಲ್ಪೆ:ಡಾ.ಎಚ್.ಡಿ.ರಂಗನಾಥ್ ಅವರು ಮುಳುಗು ತ ಈಶ್ವರ್ ಮಲ್ಪೆ ಅವರನ್ನು ಕರೆಸಿದರು. ಈಶ್ವರ್ ಮಲ್ಪೆ ಮತ್ತು ಅವರ ಸ್ನೇಹಿತರು ದೊಡ್ಡಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಕೆರೆಯ ಜಾಕ್ ವೆಲ್ನ ಸ್ವಲ್ಪ ದೂರದಲ್ಲಿ ಶವ ಇರುವುದನ್ನು ಪತ್ತೆ ಹಚ್ಚಿದ ತಂಡ
ಶವವನ್ನು ಕೆರೆಯಿಂದ ಹೊರ ತೆಗೆಯಿತು.
ಕಾರಣ ನಿಗೂಢ: ಬೆಂಗಳೂರಿನ ಸ್ಟ್ಾವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾ ಅಲ್ಲಿಯೇ ಪಿಜಿಯಲ್ಲಿ ವಾಸವಾಗಿದ್ದಳು. 15 ದಿನಕ್ಕೆ ಒಮ್ಮೆ ಗ್ರಾಮಕ್ಕೆ ಬಂದು ಹೋಗುತ್ತಿದ್ದಳು. ೆ.25ರಂದು ಶಿವರಾತ್ರಿಗೆಂದು ಬಂದು ಬಳಿಕ ೆ.27ರಂದು ಬೆಳಗ್ಗೆ 7.15ರ ಸುಮಾರಿಗೆ ಬೆಂಗಳೂರಿಗೆ ಹೋಗಿದ್ದಳು. ಆದರೆ, ಮತ್ತೆ ಅದೇ ದಿನ ಮಧ್ಯಾಹ್ನ 2.30ಕ್ಕೆ ಕುಣಿಗಲ್ಗೆ ವಾಪಸ್ ಬಂದಿದ್ದು, ದೊಡ್ಡಕೆರೆ ಸತ್ಯ ಗಣಪತಿ ದೇವಾಲಯದ ಮಂಭಾಗದ ಜಾಕ್ವೆಲ್ ಬಳಿ ಮೊಬೆಲ್, ಆಧಾರ್ ಕಾರ್ಡ್, ಬ್ಯಾಗ್, ಚಪ್ಪಲಿ ಬಿಟ್ಟು ಕಾಣೆಯಾಗಿದ್ದಳು. ಸ್ಥಳಿಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಸಂಬಂಧಿಕರು ವಸ್ತುಗಳು ಸುಮಾಳವೇ ಎಂದು ಖಚಿತಪಡಿಸಿ ಹುಡುಕಾಟ ನಡೆಸಿ, ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ಶವ ಪತ್ತೆಯಾಗಿದ್ದು, ಆತ್ಮಹತ್ಯಗೆ ಕಾರಣ ತಿಳಿದುಬರಬೇಕಾಗಿದೆ.