ದೈಹಿಕ ಶಿಕ್ಷಣ ಪದವಿ ಪರೀಕ್ಷೆಯಲ್ಲಿ ಕೊಡಗಿನ ವಿದ್ಯಾರ್ಥಿನಿಗೆ ಚಿನ್ನದ ಪದಕ

20ss2award in event
Published on

ಶನಿವಾರಸ0ತೆ:-ಕೊಡಗು ಮೂಲದ ವಿದ್ಯಾರ್ಥಿನಿ ಎಂ.ಜಿ.ಧನ್ಯ ದೈಹಿಕ ಶಿಕ್ಷಣ ಪದವಿ ಪರೀಕ್ಷೆಯಲ್ಲಿ ಬೆಂಗಳೂರು ವಿ.ವಿ.ನಿಲಯಕ್ಕೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮಿಪದ ಮೂದರವಳ್ಳಿ ಗ್ರಾಮದ ಎಂ.ಪಿ.ಗಣೇಶ ಮತ್ತು ಎಂ.ಜಿ.ಸವಿತ ದಂಪತಿ ಪುತ್ರಿಯಾದ ಎಂ.ಜಿ.ಧನ್ಯ ಬೆಂಗಳೂರು ವಿ.ವಿ.ನಿಲಯದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಧನ್ಯ 2022-24ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಶೇ90 ರಷ್ಟು ಅಂಕಗಳಿಸಿ ಬೆಂಗಳೂರು ವಿ.ವಿ.ನಿಲಯಕ್ಕೆ ಪ್ರಥಮ ಸ್ಥಾನ ತಂದುಕೊಟ್ಟು ಚಿನ್ನದ ಪದಕ ಪಡೆದುಕೊಂಡಿದ್ದರು. ಇತ್ತಿಚೆಗೆ ಬೆಂಗಳೂರಿನ ಸೆಂಟರಲ್ ಕಾಲೇಜಿನ ಜ್ಞಾನ ಜ್ಯೋತಿ ಅಡಿಟೋರಿಯಂ ನಲ್ಲಿ ನಡೆದ ಬೆಂಗಳೂರು ವಿ.ವಿ.ನಿಲಯದ 60ನೇ ಘಟಿಕೋತ್ಸವ ಸಮಾರಂಭದಲ್ಲಿ ಎಂ.ಜಿ.ಧನ್ಯಗೆ ಉನ್ನತ್ತ ಶಿಕ್ಷಣ ಶಿಕ್ಷಕ ಎಂ.ಸಿ.ಸುಧಾಕರ್ ಪ್ರಶಸ್ತಿ ಪತ್ರ ಮತ್ತು ಚಿನ್ನದ ಪದಕವನ್ನು ಪ್ರಧಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net