

ನುಗ್ಗೇಹಳ್ಳಿ: ಇಲ್ಲಿನ ಯೋಗ ಮತ್ತು ಧ್ಯಾನ ಕೇಂದ್ರದ ವತಿಯಿಂದ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಮಾಜಿ ಅಧ್ಯಕ್ಷ ಸಂತೋಷ್ ಮಾತನಾಡಿ, ಮಾನಸಿಕ, ದೈಹಿಕವಾಗಿ ಆರೋಗ್ಯ ವೃದ್ಧಿಸಲು ಯೋಗ ಅಗತ್ಯ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಹದೇವಮ್ಮ ಶಂಕರ್ ಮಾತನಾಡಿ, ಇಡೀ ವಿಶ್ವಕ್ಕೆ ಯೋಗ ಹೇಳಿಕೊಟ್ಟ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಡೀ ವಿಶ್ವವೇ ಯೋಗದ ಕಡೆ ಮುಖ ಮಾಡಿದೆ ಎಂದರು.
ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಯೋಗ ಮತ್ತು ಜ್ಞಾನ ಕೇಂದ್ರದ ಸದಸ್ಯರಾದ ಬೆಟ್ಟಯ್ಯ, ಎನ್.ಟಿ.ತ್ರಿನೇಶ್, ಶಕುಂತಲಾ ನಾಗಣ್ಣ, ಲಾವಣ್ಯಾ, ದೊರೆ ಹಾಜರಿದ್ದರು.