ದೈವತ್ವದ ಸ್ವರೂಪ ನೀಡುವ ಗುರು

2207Klb10
Published on

ಕಲಬುರಗಿ: ಮನುಷ್ಯರನ್ನು ಮಹಾ ಮಾನವನಾಗಿ ಮಾಡಿ ದೈವತ್ವದ ಸ್ವರೂಪ ನೀಡುವ ಶಕ್ತಿ ಗುರುವಿಗೆ ಇದೆ ಎಂದು ಅರಳಗುಂಡಗಿ ಜಿಪಂ ಮಾಜಿ ಸದಸ್ಯ ರೇವಣಸಿದ್ದಪ್ಪ ಸಂಕಾಲಿ ಹೇಳಿದರು.
ತಾಜಸುಲ್ತಾನಪುರ ಗ್ರಾಮದ ಚಿನ್ನದಕಂತಿ ಚಿಕ್ಕ ವೀರೇಶ್ವರ ಸಂಸ್ಥಾನ ಹಿರೇಮಠದಲ್ಲಿ ಗುರು ಪೂರ್ಣಿಮೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ನಕರಾತ್ಮಕ ಯೋಚನೆ ಮಾಡದೆ, ಸಕಾರಾತ್ಮಕವಾಗಿ ಯೋಚಿಸಿ, ಗುರುವಿನ ಮೇಲೆ ನಂಬಿಕೆ ಇಟ್ಟು ಸಾಗಬೇಕು ಎಂದರು.
ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡಿ, ಖಾಲಿ ಜೇಬು, ಹಸಿದ ಹೊಟ್ಟೆ, ಒಡೆದ ಮನಸ್ಸು ಅನುಭವಿಸಿದವ ಗುರುವಿನಿಂದ ಶಕ್ತಿಯುತವಾಗಿ ಬೆಳೆಯುತ್ತಾನೆ. ಗುರು ಸನ್ಮಾರ್ಗದ ದಾರಿ ತೋರಿಸುತ್ತಾನೆ. ಗುರುವಿನ ಪವಿತ್ರ ಸ್ಥಾನ ಉಳಿಸಿ ಸಮೃದ್ಧ ಸಮಾಜವನ್ನು ಗುರು ಕಟ್ಟುತ್ತಾರೆ ಎಂದರು.
ನಿವೃತ್ತ ಶಿP್ಷÀಕಿ ಲೀಲಾವತಿ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿದರು. ಮಾಜಿ ಸೈನಿಕ ಆದಪ್ಪ ಸಿಕೇದ ಕೋಳಕೂರ, ಗಿರೀಶಗೌಡ ಇನಾಮದಾರ, ಚನ್ನವೀರಪ್ಪ ಸಲಗರ, ಅಣವೀರಪ್ಪ ಗೌಡಪಗೋಳ, ಚನ್ನವೀರ ಚಕ್ಕಿ, ರಾಜು ಜೈನ, ನೂರಂದಯ್ಯ ಸ್ವಾಮಿ, ಶಿವಶರಣಪ್ಪ ಹಿರೇಮನಿ, ಶಿವಲಿಂಗಪ್ಪ ಮಾಳಾ, ನಾಗಣ್ಣ ಚೌಡಾಪುರ, ಶರಣಬಸಪ್ಪ ಮಚೆಟ್ಟಿ, ಮಹೇಶ ಬೀರನಳ್ಳಿ, ನಾಗೇಂದ್ರ ದೇಗಲಮಡ್ಡಿ, ಶಿವಯ್ಯ ಸ್ವಾಮಿ, ವೀರಯ್ಯ ಬಾಳಿ, ರಾಚಣ್ಣ ಸಂಗೊಳಗಿ, ಶರಣು ಮಾಮಾನಿ, ಚಿನ್ನಪ್ಪ ಮಾಮಾನಿ, ಶ್ರೀಶೈಲ ಕಲಕೋರಿ ಇತರರಿದ್ದರು.
ಶರಣಯ್ಯ ಹೊಸಮಠ ಪ್ರಾರ್ಥಿಸಿದರು. ವಕೀಲ ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ವಿನೋದ ಮಾಳಾ ನಿರೂಪಣೆ ಮಾಡಿದರು. ರವಿಕುಮಾರ ಶಹಾಪೂರಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net