ದೈವಗಳ ಕೋಲ ನೇಮೋತ್ಸವ

16˜spt3
Published on

ಸೋಮವಾರಪೇಟೆ: ಸಮೀಪದ ಐಗೂರು ಗ್ರಾಮದ ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣಮೂರ್ತಿ ಅಮ್ಮನವರ ದೈವಸ್ಥಾನದ 47ನೇ ವರ್ಷದ ದೈವಗಳ ಕೋಲ ನೇಮೋತ್ಸವ ಭಾನುವಾರ ನೆರವೇರಿತು.


ಮುಂಜಾನೆ 5ಕ್ಕೆ ಕಳಸದ ಮೆರವಣಿಗೆ, ಬೆಳಗ್ಗೆ 10 ಗಂಟೆಗೆ ಮಹಾಪೂಜೆ, 11.30ಕ್ಕೆ ಆದಿಶಕ್ತಿ ಮಹಾತಾಯಿ ದರ್ಶನ ಜರುಗಿತು. ಪಾಷಾಣಮೂರ್ತಿ ಮತ್ತು ಕಲ್ಕುಡ ದೈವಗಳ ಕೋಲ ನಡೆಯಿತು.

ದೇವಾಲಯದ ದೈವದರ್ಶಿ ಆನಂದ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆದವು. ಸುಳ್ಯದ ಜಯರಾಮ ಬೊಳಿಯ ಮಜಲು ಮತ್ತು ಸಹಪಾಠಿಗಳು ದೈವ ನರ್ತನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net