

ಚನ್ನರಾಯಪಟಣ: ರಕ್ತದಾನ, ನೇತ್ರದಾನ, ದೇಹದಾನಗಳ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಪ್ರಸನ್ನ ಗಣಪತಿ ಸೇವಾಸಮತಿ ಅಧ್ಯಕ್ಷ ಸಿ.ಎನ್.ಅಶೋಕ್ ತಿಳಿಸಿದರು.
ಪಟ್ಟಣದಲ್ಲಿನ ಗಣಪತಿ ಪೆಂಡಾಲಿನಲ್ಲಿ ಗಣಪತಿ ಸೇವಾಸಮಿತಿ, ತೇರಾ ಪಂತ್ ಯುವಕ ಪರಿಷತ್ತು ಮತ್ತು ಮಕ್ಕಳ ಸಾಹಿತ್ಯ ಪರಿಷತ್ತು, ಮತ್ತು ರೆಡ್‌ಕ್ರಾಸ್ ಸಂಸ್ಥೆ, ಯೋಗ ಒಕ್ಕೂಟದ ಸಹಯೋಗದಲ್ಲಿ ಅಯೋಜಿಸಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನುಷ್ಯನಾದವನು ನೊಂದ ಜನರ ನೆರವಿಗೆ ಮುಂದಾಗಬೇಕೆಂದರು.
ದೇಶದಲ್ಲಿ ಕೋಟ್ಯಾಂತರ ಜನಸಂಖ್ಯೆಯಿದ್ದರೂ ರಕ್ತಭಾದೆಯಿಂದ ನರಳುವವರ ಸಂಖ್ಯೆ ಹೆಚ್ಚಾಗಿದೆ. ಯುವಕರು ಹೆಚ್ಚು ರಕ್ತದಾನದಲ್ಲಿ ತೊಡಗಬೇಕು, ಇದರಿಂದ ಅಪಘಾತ, ಹೆರಿಗೆ, ಅನಾರೋಗ್ಯ ವೇಳೇ ಸಂದರ್ಭದಲ್ಲಿ ರಕ್ತ ಹುಡುಕಿಕೊಂಡು ಆಲೆಯುವ ಪರಿಸ್ಥಿತಿ ತಪ್ಪುತ್ತದೆ. ಇದನ್ನು ಮನಗಂಡು ಗಣಪತಿ ಸೇವಾಸಮಿತಿಯು ಪ್ರತಿವರ್ಷ ರಕ್ತದಾನ ಶಿಬಿರವನ್ನು ಅಯೋಜಿಸುತ್ತಿದೆ ಎಂದರು.
ಪ್ರಸಕ್ತ ವರ್ಷ ಪ್ರತಿಷ್ಠಾಪಿಸಲಾಗಿರುವ ಗಣಪತಿ ಪೆಂಡಾಲಿನಲ್ಲಿ 48ದಿನಗಳು ಕಾಲ ಪ್ರತಿದಿನ ಅನ್ನದಾಸೋಹ, ಆರೋಗ್ಯ ಶಿಬಿರಗಳು. ರಕ್ತದಾನ, ನೇತ್ರದಾನ ನೊಂದಣಿ, ಯೋಗ ಸೇರಿದಂತೆ ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.
ಶಿಬಿರದಲ್ಲಿ 110 ಮಂದಿ ರಕ್ತದಾನ ಮಾಡಿದರೇ, 14 ಮಂದಿ ದೇಹದಾನ ಮತ್ತು 50 ಮಂದಿ ನೇತ್ರದಾನ ನೊಂದಣಿ ಮಾಡಿಕೊಂಡರು. ಆಗ್ನಿಪಥ್ ಯುವಕರು, ಮತ್ತು ಯೋಗ ಒಕ್ಕೂಟದ ಶಿಬಿರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಭಾಗವಹಿಸಿದ್ದರು. ಹಾಸನದ ಜೀವರಕ್ಷ ರಕ್ತನಿಧಿಯವರು ರಕ್ತದಾನ ಕಾರ್ಯ ನಡೆಸಿದರು.
ಸೇವಾಸಮಿತಿ ಪದಾಧಿಕಾರಿಗಳಾದ ಸತ್ಯನಾರಾಯಣ್, ಸಿಕೆ ಕೃಷ್ಣ, ರವೀಂದ್ರ, ಗಂಗಾಧರ್, ಜಗದೀಶ್, ಚೇತನ್ ಗುರೂಜಿ, ಗಜಾನನ ಮನೋಹರ್ ಸೇರಿ ಇತರರು ಇದ್ದರು.