

ಚಿತ್ರದುರ್ಗ: ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ಧ್ಯಾನ, ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿಯಾಗಿ ಸಾಧನೆ ದಾರಿ ಯಾಗುತ್ತದೆ ಎಂದು ದಾವಣಗೆರೆ ವಿರಕ್ತ ಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಜಗದ್ಗುರು ಜಯದೇವ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ ಪುರುಷರ ಅಂತರ ಕಾಲೇಜು ಹಾಕಿ ಪಂದ್ಯಾವಳಿ ಹಾಗೂ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ದಾವಿವಿಯ ಶಿವಗಂಗೋತ್ರಿ, ಚಳ್ಳಕೆರೆ ಎಚ್‌ಪಿಸಿಸಿ ಸರ್ಕಾರಿ ಕಾಲೇಜು, ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಲ್ಲಾಡಿಹಳ್ಳಿ ಸಿಸಿಪಿ, ಹೊಸದುರ್ಗ ಸರ್ಕಾರಿ ಪದವಿ ಕಾಲೇಜಿನ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಪ್ರಾಚಾರ್ಯ ಡಾ.ಎಲ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಎಂ.ಎಸ್. ಪರಮೇಶ್ವರ್, ಪ್ರೊ.ಸಿ.ಟಿ. ಜಯಣ್ಣ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಸನ್ನಕುಮಾರ್, ಡಾ. ರಾಘವೇಂದ್ರ, ಪ್ರಶಾಂತ್, ಶಿವಾನಂದಪ್ಪ, ಜಿ.ಎಸ್.ನಾಗರಾಜ್, ಗಿರೀಶ್, ರಮ್ಯಾ, ಸುಧಾರಾಣಿ, ಶಿವಕುಮಾರ್, ಡಾ. ಶ್ವೇತಾ, ದೈಹಿಕ ಶಿಕ್ಷಣ ನಿವೃತ್ತ ನಿರ್ದೇಶಕ ಮಕ್ಸೂದ್‌ಅಹಮದ್, ಬಿ.ಜಿ. ನಾಗರಾಜ್,ತಿಪ್ಪೇಸ್ವಾಮಿ, ತೀರ್ಪುಗಾರರಾದ ರಾಕೇಶ್, ಅವಿನಾಶ್, ಧನರಾಜ್, ಸಿ.ವಿ. ಮಂಜುನಾಥ ಇತರರು ಇದ್ದರು.
ನವೀನ್ ನಿರೂಪಿಸಿದರು.