ದೇಸಿ ಕ್ರೀಡೆಗಳ ಉಳಿವಿಗೆ ಶ್ರಮಿಸೋಣ - ಗಜಾನನ ಮನ್ನಿಕೇರಿ

010203
Published on

ಮೂಡಲಗಿ: ದೇಸಿ ಕ್ರೀಡೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಗಜಾನನ ಮನ್ನಿಕೇರಿ ಹೇಳಿದರು.

ತಾಲೂಕಿನ ನಾಗನೂರ ಪಟ್ಟಣದಲ್ಲಿ ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ನಾಗನೂರು ಹಾಗೂ ಕರ್ನಾಟಕ ರಾಜ್ಯ ಖೋಖೋ ಸಂಸ್ಥೆ ಬೆಂಗಳೂರು ಮತ್ತು ಬೆಳಗಾವಿ ಜಿಲ್ಲಾ ಖೋಖೋ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಸೀನಿಯರ್ ಪುರುಷರ ಮತ್ತು ಮಹಿಳೆಯರ ಆಹ್ವಾನಿತ ಖೋ-ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ನಾಗನೂರಿನಲ್ಲಿ ಪ್ರತಿ ಮನೆಗೆ ಒಬ್ಬರಂತೆ ಖೋ-ಖೋ ಕ್ರೀಡಾಪಟುಗಳು ಬೆಳೆದಿದ್ದು ಹೆಮ್ಮೆಯ ಸಂಗತಿ ಎಂದರು.

ಕರ್ನಾಟಕ ಖೋಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್ ಎಂ. ಮಾತನಾಡಿ, ಕ್ರೀಡೆಗಾಗಿ ಸಮರ್ಪಿಸಿಕೊಂಡ ಈರಣ್ಣ ಹಳಿಗೌಡರ ಅವರನ್ನು ರಾಜ್ಯದ ಖೋ ಖೋ ತಂಡದ ಟೀಮ್ ಮ್ಯಾನೇಜರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.

ಹುಕ್ಕೇರಿ ಅವಜಿಕರ ಕ್ಯಾರಗುಡ್ಡಮಠದ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ಕ್ರೀಡಾಪಟುಗಳು ಕಟ್ಟುಮಸ್ತಾದ ಮೈಕಟ್ಟು ನಿರ್ಮಿಸಿಕೊಳ್ಳಬೇಕು. ಯುವಜನರು ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು.

ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಸಿ.ಆರ್. ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮನ್ನಿಕೇರಿ, ಲೋಕೇಶ್ವರ್ ಅವರನ್ನು ಸತ್ಕರಿಸಲಾಯಿತು.

ಮೂಡಲಗಿ ಬಿಇಒ ಅಜಿತ ಮನ್ನಿಕೇರಿ, ಜಿಲ್ಲಾ ದೈಹಿಕ ಶಿಕ್ಷಣ ಅಧ್ಯಕ್ಷ ಜುನೈದ್ ಪಟೇಲ, ಟಿಪಿಒ ಎಸ್.ಬಿ. ಹಳಿಗೌಡರ, ಶಿವಯೋಗಿ ಎಲಿ, ಶ್ರೀನಿವಾಸ ಒ, ಕೆಂಚನಗೌಡ ಪಾಟೀಲ, ಪರಸಪ್ಪ ಬಬಲಿ, ರಾಮನಗೌಡ ಪಾಟೀಲ, ಕೆ.ಸಿ.ಇಟ್ಟಿಗುಡಿ, ಅಸೋಸಿಯೇಷನ್ ಅಧ್ಯಕ್ಷ ಗಜಾನನ ಯರಗಣವಿ, ಸಂಸ್ಥೆ ಕಾರ್ಯದರ್ಶಿ ಈರಣ್ಣ ಹಳಿಗೌಡರ, ಪರಸಪ್ಪ ಗುಡೇನ್ನವರ, ಸಂಪತ ಗಾಣಿಗ, ಮಲ್ಲಪ್ಪ ಹೊಸಮನಿ, ಬಸವರಾಜ ಮುತ್ತನಾಳ, ಎಸ್.ಬಿ. ಕೇದಾರಿ, ಬಸವರಾಜ ಕರಿಹೋಳಿ, ಅರುಣ ಕುಲಕರ್ಣಿ, ಅರ್ಜುನ ಕೋಲೂರು, ಭೀಮಪ್ಪ ಪಾಟೀಲ, ಸಿ.ಎಸ್ ಹಿರೇಮಠ, ವೀರಭದ್ರಯ್ಯ ಮಠಪತಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net