ದೇಸಿ ಕ್ರೀಡೆಗಳಿಂದ ಆರೋಗ್ಯ ಸದೃಢ

12 lxr 1
Published on

ಲಕ್ಷ್ಮೇಶ್ವರ: ಭಾರತೀಯ ಸಾಂಪ್ರದಾಯಿಕ ಕ್ರೀಡೆಗಳು ದೈಹಿಕ, ಬೌದ್ಧಿ್ದ ಕಸರತ್ತಿಗೆ ಪ್ರಾಮುಖ್ಯತೆ ನೀಡುವಂತೆ ರೂಪಿಸಿದ್ದು, ನಮ್ಮ ದೈಹಿಕ ಆರೋಗ್ಯ ಕಾಪಾಡುವ ಕಾರ್ಯ ಮಾಡುತ್ತವೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ಗರಡಿಮನೆ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಬಡ್ಡಿ, ಚದುರಂಗ, ಖೋಖೋ, ಕತ್ತಿವರಸೆ, ಮಲ್ಲಕಂಬ ಹೀಗೆ ಪ್ರತಿಯೊಂದು ಆಟವು ನಮ್ಮ ದೇಸಿ ಸೊಗಡು ಮೈಗೂಡಿಸಿಕೊಂಡು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಒತ್ತು ನೀಡುತ್ತಿದ್ದವು. ಆದರೆ, ಇಂದು ಮಕ್ಕಳು ಮೊಬೈಲ್​ಫೋನ್, ಟಿವಿ ಮತ್ತು ಕಂಪ್ಯೂಟರ್ ಬಿಟ್ಟು ಹೊರಗೆ ಬರಲು ಅಂಜುತ್ತಿವೆ. ಇದರಿಂದ ಮಕ್ಕಳ ಆಯಸ್ಸು ಕಡಿಮೆಯಾಗುವ ಆತಂಕ ಕಾಡುತ್ತಿದೆ. ಆದ್ದರಿಂದ ಮಕ್ಕಳಿಗೆ ಕ್ರೀಡೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಪಾಲಕರು ಪ್ರೋತ್ಸಾಹಿಸಬೇಕು ಎಂದರು.

ಪುರಸಭೆ ಸದಸ್ಯೆ ಯಲ್ಲವ್ವ ದುರಗಣ್ಣವರ, ರಾಮಣ್ಣ ಉಳ್ಳಟ್ಟಿ, ವಿ.ಜಿ. ಪಡಗೇರಿ, ಪ್ರವೀಣ ಬಾಳಿಕಾಯಿ, ಎಂ.ಆರ್. ಪಾಟೀಲ, ಮಹೇಶ ಲಿಂಬಯ್ಯಸ್ವಾಮಿಮಠ, ನಿಂಗಪ್ಪ ಬನ್ನಿ, ಗಂಗಪ್ಪ ದುರಗಣ್ಣವರ, ಸೋಮಣ್ಣ ಉಳ್ಳಟ್ಟಿ, ಸಿದ್ದಪ್ಪ ಪೂಜಾರ, ಮಂಜುನಾಥ ಪೂಜಾರ, ಹನುಮಂತಪ್ಪ ಉಳ್ಳಟ್ಟಿ, ದುಂಡೇಶ ಕೊಟಗಿ, ಹನುಮಂತಪ್ಪ ಬನ್ನಿ, ನೀಲಪ್ಪ ಪೂಜಾರ, ರಾಮಣ್ಣ ರಿತ್ತಿ, ಗಂಗಾಧರ ಮೆಣಸಿನಕಾಯಿ, ನೀಲಪ್ಪ ಹತ್ತಿ, ಶಕ್ತಿ ಕತ್ತಿ, ವಿಜಯ ಕುಂಬಾರ, ಶಿವಯೋಗಿ ಅಂಕಲಕೋಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net