

ಚಿತ್ರದುರ್ಗ: ಪ್ರಕೃತಿ ಆಧರಿಸಿದ ಆರೋಗ್ಯಕರ ಜೀವನದ ಆಶಯದೊಂದಿಗೆ ಕೇಂದ್ರದ ಆಯುಷ್ ಮಂತ್ರಾಲಯ ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನ ಹಮ್ಮಿಕೊಂಡಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಂದ್ರ ತಿಳಿಸಿದ್ದಾರೆ.
ಕಳೆದ ನವೆಂಬರ್ 26ರಿಂದ ಆರಂಭವಾಗಿರುವ ಈ ರಾಷ್ಟ್ರೀಯ ಅಭಿಯಾನ ಡಿ.25 ರವರೆಗೆ ದೇಶಾದ್ಯಂತ ನಡೆಯಲಿದೆ. ಇದು ಮೊಬೈ ಲ್ ಆ್ಯಪ್ ಆಧಾರಿತ ಕಾರ್ಯಕ್ರಮವಾಗಿದೆ. ಆ್ಯಪ್ ಅಳವಡಿಸಿಕೊಂಡು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರೆ, ಆರೋಗ್ಯಕ್ಕೆ ಪೂರಕ ಸಲಹೆ, ಸೂಚನೆಗಳು ಮೊಬೈಲ್‌ಗೆ ಬರಲಿವೆ. ಆಸಕ್ತರು ಹತ್ತಿರದ ಆಯುಷ್ ಆಸ್ಪತ್ರೆ, ಚಿಕಿತ್ಸಾಲಯ ಸಂಪರ್ಕಿಸಿದರೆ ಅಲ್ಲಿಯ ವೈದ್ಯಾಧಿಕಾರಿ, ಸಿಬ್ಬಂದಿ ಆ್ಯಪ್ ಡೌನ್‌ಲೋಡ್‌ಮಾಡಿಕೊಳ್ಳಲು ಸಹಕರಿಸುತ್ತಾರೆ ಎಂದು ತಿಳಿಸಿದ್ದಾರೆ.