ದೇಶೀಯ ಕಲೆ ಮುಂದಿನ ಪೀಳಿಗೆಗೆ ಪರಿಚಯಿಸಿ, ಗಾಳಿಪಟ ಸ್ಪರ್ಧೆ, ರಂಗೋಲಿ ಸ್ಪರ್ಧೆ

15 dhl JCI Rangooli news ph -1
Published on

ದೇವನಹಳ್ಳಿ: ಜೆಸಿಐ ವ್ಯಕ್ತಿತ್ವ ವಿಕಸನದ ಸಮಾಜಸೇವಾ ಸಂಸ್ಥೆಯಾಗಿದ್ದು, ಪ್ರತಿ ವರ್ಷ ಗಾಳಿಪಟ ಸ್ಪರ್ಧೆ, ರಂಗೋಲಿ ಸ್ಪರ್ಧೆ ಏರ್ಪಡಿಸುವ ಮೂಲಕ ದೇಶೀಯ ಕಲೆ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದು ಪುರಸಭೆ ಸದಸ್ಯ ರುದ್ರೇಶ್ ಅಭಿಪ್ರಾಯಪಟ್ಟರು.

ದೇವನಹಳ್ಳಿಯ 14ನೇ ವಾರ್ಡ್‌ನಲ್ಲಿ ಸಂಕ್ರಾಂತಿ ಪ್ರಯುಕ್ತ ಜೆಸಿಐಯಿಂದ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ರಂಗೋಲಿ ಸ್ಪರ್ಧೆಯಿಂದ ಯುವತಿಯರಿಗೆ ಆ ಕಲೆ ಬಗ್ಗೆ ಆಸಕ್ತಿ ಹೆಚ್ಚಲಿದೆ ಎಂದರು.

14ನೇ ವಾರ್ಡ್‌ನ ನಗರ್ತರ ಬೀದಿ, ಮಹಂತರಮಠದ ರಸ್ತೆಯ ಬಡಾವಣೆಯ 150 ಹೆಚ್ಚು ಮನೆಗಳ ಮುಂದೆ ಬಣ್ಣದ ರಂಗೋಲಿ ಹಾಕಲಾಗಿತ್ತು. ಜಯಲಕ್ಷ್ಮೀ ಗಂಗಾಧರ್ ಪ್ರಥಮ, ವಿಮಲಾ ಹಾಗೂ ಶಾಂತಮ್ಮ ದ್ವಿತೀಯ, ಕುಮದಾರಾಣಿ ರವಿಕುಮಾರ್ ತೃತೀಯ ಬಹುಮಾನ ಪಡೆದುಕೊಂಡರು.

ಪುರಸಭೆ ಸದಸ್ಯರಾದ ಜಿ.ಎ.ರವೀಂದ್ರ, ಮುನಿಕೃಷ್ಣ, ಜೆಸಿಐ ಅಧ್ಯಕ್ಷ ವೈ.ಪಿ.ಪ್ರವೀಣ್‌ಕುಮಾರ್, ಪೂರ್ವಾಧ್ಯಕ್ಷ ಎಂ.ಆನಂದ, ಯೋಜನಾ ನಿರ್ದೇಶಕರಾದ ಬಿ.ಗಿರೀಶ್, ವಿ.ಮಂಜುನಾಥ್, ಜೆಸಿರೇಟ್ ಅಧ್ಯಕ್ಷೆ ಮಮತಾ ಪ್ರವೀಣ್‌ಕುಮಾರ್, ಕಾರ್ಯದರ್ಶಿ ಎಚ್.ವಾಸುದೇವ್, ಪದಾಧಿಕಾರಿಗಳಾದ ಆರ್.ವಿಶ್ವನಾಥ್, ಪ್ರಭುದೇವ್, ಬಿ.ಪವನ್, ಅಮರ್, ತೀರ್ಪುಗಾರರಾದ ಭಾಗ್ಯಾ ರಮೇಶ್, ರಮ್ಯಾ ಮುನಿಕೃಷ್ಣ, ಮಾಲ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net