

ಗುಂಡ್ಲುಪೇಟೆ: ತಾಲೂಕಿನ ದೇಶಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬುಧವಾರ ಮಕ್ಕಳಿಂದ ಬೀಜದುಂಡೆಗಳನ್ನು ತಯಾರು ಮಾಡಸಲಾಯಿತು.
ಈ ಚಟುವಟಿಕೆಯಲ್ಲಿ ಮಕ್ಕಳು ಸ್ಥಳೀಯವಾಗಿ ಸಿಗುವಂತಹ ಹಲವಾರು ಜಾತಿಯ ಸಸ್ಯಗಳ ಬೀಜಗಳನ್ನು ಸಂಗ್ರಹಿಸಿ ಮಣ್ಣಿನ ಉಂಡೆಗಳಲ್ಲಿ ಸೇರಿಸಿದರು. ಇದೇ ವೇಳೆ ಮುಖ್ಯಶಿಕ್ಷಕ ನಂದೀಶ ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸಿದರು. ಪರಿಸರ ಜಾಗೃತಿ ಮತ್ತು ಸಂರಕ್ಷಣೆಯ ಬಗ್ಗೆ ಚಿತ್ರಕಲೆ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಗುವುದು ಎಂದರು. ಶಾಲಾ ಆವರಣದಲ್ಲಿ ಮಕ್ಕಳ ಕೈಯಲ್ಲಿ ಗಿಡಗಳನ್ನು ನಡೆಸಿ ಅದನ್ನು ಪೋಷಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ನೀಡಿದರು.