

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಧುನಿಕತೆಯ ಭರಾಟೆಯಿಂದ ದೇಶಿ ಆಟಗಳು ಮರೆಯÁಗುತ್ತಿವೆ. ಆದ್ದರಿಂದ ಯುವಕರಲ್ಲಿ ದೇಶಿ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಶಾಸಕ ಅಮೃತ ದೇಸಾಯಿ ಸ್ಪೋರ್ಟ್ಸ್ ಅಸೋಸಿಯೇಶನ್‌ನಿಂದ ಆಯೋಜಿಸಿರುವ ರಾಜ್ಯ ಮಟ್ಟದ ಹೆಬ್ಬಳ್ಳಿ ಕಬಡ್ಡಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಿ ಅವರು ಮÁತನಾಡಿದರು.
ಪ್ರತಿ ಹಳ್ಳಿ, ತಾಲ್ಲೂಕು, ಜಿಲ್ಲೆಯಲ್ಲಿ ದೇಸಿ ಕ್ರೀಡೆಗಳನ್ನು ಆಯೋಜಿಸಿ, ಪ್ರೋತ್ಸಾಹಿಸುವ ಮೂಲಕ ನಶಿಸಿ ಹೋಗುತ್ತಿರುವ ದೇಶಿ ಕ್ರೀಡೆಗಳನ್ನು ಪುನಃಶ್ಚೇತನಗೊಳಿಸುವ ಕೆಲಸವಾಗಬೇಕಿದೆ ಎಂದರು.
ಯುವಕರೊAದಿಗೆ ಕಬಡ್ಡಿ ಆಡುವ ಮೂಲಕ ಸಭಾಪತಿ ಬಸವರಾಜ ಹೊರಟ್ಟಿ ಸಂಭ್ರಮಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮÁತನಾಡಿ, ದೇಶಿ ಕ್ರೀಡೆಗಳಿಗೆ ಚೈತನ್ಯ ತುಂಬಲು ಕಬಡ್ಡಿ ಪಂದ್ಯಾವಳಿ ಪ್ರೇರಣಾದಾಕ ಎಂದರು.
ಶಾಸಕ ಅಮೃತ ದೇಸಾಯಿ ಮÁತನಾಡಿ, ದೇಶದ ಪರಂಪರೆ, ಸಂಸ್ಕೃತಿ, ಸಂಸ್ಕಾರ, ಅಚಾರ ವಿಚಾರಗಳು, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರು ಮೇಲಿದೆ ಎಂದರು.
ಬ್ರಹ್ಮಚೇತನ ಆಶ್ರಮದ ಶ್ರೀ ದತ್ತಾವಧೂತ ಸ್ವಾಮೀಜಿ, ಶಿವಾನಂದ ಮಠದ ವಾಸುದೇವ ಸ್ವಾಮೀಜಿ, ಯೋಗಾಶ್ರಮದ ಯೋಗಾನಂದ ಸ್ವಾಮೀಜಿ, ಮÁಜಿ ಶಾಸಕಿ ಸೀಮÁ ಮಸೂತಿ, ಬಸವರಾಜ ಕುಂದಗೋಳಮಠ, ಶಂಕರ ಮುಗದ, ಇತರರಿದ್ದರು.