ದೇಶವನ್ನು ಒಡೆಯುವ ಕೃತಿಗಳೇ ಹೆಚ್ಚಾಗುತ್ತಿವೆ : ಜ್ಞಾನ ಪ್ರಕಾಶ ಸ್ವಾಮೀಜಿ ಕಳವಳ

jnana prakash swamiji
Published on

ಮೈಸೂರು: ನಗರದ ನಟರಾಜ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಮಂಜು ಮಹದೇವ್ ಹೊಂಗನೂರು ರಚನೆಯ ‘ಜೀವಂತ’ ಕವಲ ಸಂಕಲ ಬಿಡುಗಡೆ ಸಮಾರಂಭ ನಡೆಯಿತು.

ಕೃತಿ ಬಿಡುಗಡೆ ಮಾಡಿದ ಶ್ರೀ ಉರಿಲಿಂಗಿಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಸಾಹಿತ್ಯ ಮನುಷ್ಯನ ಅಂಧಕಾರ ತೊಡೆದು ಹಾಕಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಆದರೆ, ಇತ್ತೀಚೆಗೆ ದೇಶವನ್ನು ಒಡೆಯುವ ಸಾಹಿತ್ಯವೇ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ಬಡತನ, ಹಸಿವು ಹೆಚ್ಚಾಗುತ್ತಿದೆ. ದೇಶದಲ್ಲಿ ಶೇ.40 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಭ್ರಷ್ಟಾಚಾರ ಪ್ರಮಾಣ ಹೆಚ್ಚಾಗುತ್ತಿದೆ. ಇಂತಹ ಪ್ರಮುಖ ವಿಷಯಗಳ ಕುರಿತು ದೇಶದಲ್ಲಿ ಚರ್ಚೆಯೇ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀ ಹೊಸಮಠ ಶ್ರೀ ಚಿದಾನಂದ ಮಹಾಸ್ವಾಮಿ, ಸಾಹಿತಿ ಡಾ.ಜಯಪ್ಪ ಹೊನ್ನಾಳಿ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಶೈಕ್ಷಣಿಕ ಸಂಯೋಜಕ ಡಾ. ಜಯಪ್ರಕಾಶ್, ಪ್ರಾಂಶುಪಾಲ ಡಾ.ಮಹೇಶ್, ಕವಿ ಮಂಜು ಮಹದೇವ್ ಹೊಂಗನೂರು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net