

ಚಿಕ್ಕಮಗಳೂರು: ನಮ್ಮ ದೇಶದಲ್ಲಿ ಒಗ್ಗಟ್ಟಿದೆ ಎಂದರೆ ಅದಕ್ಕೆ ಕಾರಣ ಭಾರತದ ಸಂವಿಧಾನ. ಆದ್ದರಿಂದ ದೇಶವನ್ನು ಒಟ್ಟಾಗಿ ಇಡುವ ಬಲವಾದ ಶಕ್ತಿ ಸಂವಿಧಾನ ಎಂದು ಮಾಡೆಲ್ ಶಾಲೆಯ ಸಂಸ್ಥಾಪಕ ಎಂ.ಎನ್.ಷಡಕ್ಷರಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಮಾಡೆಲ್ ಆಂಗ್ಲ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನುz್ದೆÃಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಏನಾದರಾಗಬೇಕು ಎಂದು ಕನಸು ಕಂಡಿದ್ದರೆ ಮಹಾತ್ಮರ ಜೀವನ ಚರಿತ್ರೆ ಓದಿ ಎಂದು ಕರೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಅನುಭವಿಸಿದ ಅವಮಾನಗಳು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿರದೇ ಪ್ರಪಂಚದ ಬೇರೆ ಬೇರೆ ದೇಶಗಳ ಜನರು ಈ ಅವಮಾನಗಳಿಂದ ಹೊರತಾಗಿಲ್ಲ. ಯಾರು ಕದಿಯಲಿಕ್ಕಾಗದ ವಸ್ತು ಎಂದರೆ ಅದುವೇ ಜ್ಞಾನ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಹೊಸದನ್ನು ಕಲಿಯುವ ತವಕ, ಪ್ರಪಂಚವನ್ನು ಆಳುವ ಜ್ಞಾನವಿರಬೇಕು ಎಂದರು.
ಶಾಲೆಯ ಮುಖ್ಯಶಿಕ್ಷಕ ಯೋಗೀಶ್ ಮಾತನಾಡಿ, ಯಾವ ದೇಶದಲ್ಲಿ ಒಬ್ಬ ವಿದ್ಯಾರ್ಥಿಗೆ ಪುಸ್ತಕ ಹಿಡಿಯಲು ಅವಕಾಶ ಸಿಗಲಿಲ್ಲವೋ ಮುಂದೆ ಅದೇ ವಿದ್ಯಾರ್ಥಿ ಬರೆದ ಪುಸ್ತಕವನ್ನು ಇಡೀ ದೇಶ ಓದುವ ಸಂದರ್ಭ ಬಂದೊದಗಿತು. ಆ ಮಹಾನ್ ವ್ಯಕ್ತಿಯೇ ಡಾ. ಬಿ.ಆರ್ ಅಂಬೇಡ್ಕರ್. ಅವರು ರಚಿಸಿದ ಪುಸ್ತಕವೇ ಸಂವಿಧಾನ. ಎಲ್ಲ ಅವಮಾನಗಳಿಗೂ ಶಿಕ್ಷಣದ ಮೂಲಕ ಉತ್ತರ ಕೊಟ್ಟ ಧೀಮಂತ ವ್ಯಕ್ತಿ ಇವರು ಎಂದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಟಿ.ಎಸ್ ನಿರಂಜನ್ ಉಪಸ್ಥಿತರಿದ್ದರು. ಡಾ.ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧÀ ಸ್ಪಧೆÉðಯನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.