ದೇಶಭಕ್ತಿಗೆ ಮತ್ತೊಂದು ಹೆಸರೇ ರಾಯಣ್ಣ - ಪವನ ಕತ್ತಿ

03
Published on

ಸಂಕೇಶ್ವರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದರೆ, ಸ್ವಾಮಿ ನಿಷ್ಟೆ, ಸ್ವಾಭಿಮಾನ ಮತ್ತು ದೇಶಭಕ್ತಿಗೆ ಮತ್ತೊಂದು ಹೆಸರಾಗಿದೆ. ಅವರಿಂದ ಸ್ಫೂರ್ತಿ ಪಡೆದು ನಾಡು, ನುಡಿ, ನೆಲ, ಜಲ ಸಂರಕ್ಷಣೆಗೆ ಪ್ರತಿಯೋಬ್ಬರು ಹೋರಾಟ ಮಾಡಬೇಕು ಎಂದು ಜಿಪಂ ಮಾಜಿ ಸದಸ್ಯ ಪವನ ಕತ್ತಿ ಹೇಳಿದರು.

ಸಂಗೊಳ್ಳಿ ರಾಯಣ್ಣ ಅವರ ಜಯಂತ್ಯುತ್ಸವ ಹಾಗೂ ಸ್ವಾತಂತ್ರದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಜೇಶ್ವರಿ ವಿಶ್ವನಾಥ ಕತ್ತಿ ಪ್ರತಿಷ್ಠಾನದಿಂದ ಸಂಕೇಶ್ವರ ಹಳೇ ಪಿ.ಬಿ. ರಸ್ತೆಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಗಜಾನನ ಕೊಳ್ಳಿ, ಪುರಸಭೆ ಅಧ್ಯೆ ಸೀಮಾ ಹತನೂರೆ, ಅಜಿತ್​ ಕರಜಗಿ, ಸ್ಥಾಯಿ ಸಮಿತಿ ಚೇರ್ಮನ್​ ಸುನೀಲ ಪರ್ವತರಾವ್​, ರಾಜ್ಯ ಪ್ರದೇಶ ಕುರುಬರ ಸಂದ ಉಪಾಧ್ಯಕ್ಷ ಶಂಕರರಾವ್​ ಹೆಗಡೆ, ಮಾಜಿ ನಗರಾಧ್ಯಕ್ಷ ಶ್ರೀಕಾಂತ ಹತನೂರೆ, ಪುರಸಭೆ ಸದಸ್ಯರಾದ ಅಮರ ನಲವಡೆ, ಸಂಜಯ್​ ಶಿರಕೋಳ, ಶಿವಾನಂದ ಮುಡಶಿ, ರೋಹನ ನೇಸರಿ, ಸಚಿನ್​ ಹೆಗಡೆ, ಕುಮಾರ ಬಸ್ತವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net