ದೇಶಭಕ್ತಿ ಗೀತೆ ಗಾಯನ, ನಿವೃತ್ತ ಯೋಧರಿಗೆ ಸನ್ಮಾನ

IMG20230814112820 copy
Published on

ಯಾದಗಿರಿ: ಓರ್ವ ತ್ಯಾಗಮು ಜೀವಿಯ ಫಲ ಆತನಗಲ್ಲದೆ ಸುತ್ತಲಿರುವ ಜನರಿಗೂ ಪ್ರಾಪ್ತಿಯಾಗಲಿದೆ. ಹೀಗಾಗಿ ಸತಲಗಳನ್ನು ಪಡೆಯಬೇಕಾದರೆ ತ್ಯಾಗ, ನಿಸ್ವಾರ್ಥ ಮತ್ತು ಪ್ರಾಮಾಣಿಕರ ಜತೆಗೂಡಬೇಕು ಎಂದು ಶ್ರೀಸೂಗುರೇಶ್ವರ ಶಿವಾಚಾರ್ಯರು ನುಡಿದರು.


ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೋಮವಾರ ಶಹಾಪುರ ಕುಂಬಾರ ಓಣಿಯ ಹಿರೇಮಠದಲ್ಲಿ ನಾದಮಯ ಸಂಗೀತ ಸೇವಾ ಟ್ರಸ್ಟ್ನಿಂದ ಆಯೋಜಿಸಿದ್ದ ದೇಶಭಕ್ತಿ ಗೀತೆ ಗಾಯನ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ನಮ್ಮ ವೀರಯೋಧರು ತಮ್ಮ ಕುಟುಂಬ ಸೇರಿ ಆಸೆ, ಆಕಾಂಕ್ಷೆಯನ್ನು ಬಿಟ್ಟು ದೇಶ ಸೇವೆಯೇ ಈಶ ಸೇವೆ ಎಂದು ಹೋರಾಡುತ್ತಾರೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೆ ಪಣವಾಗಿಟ್ಟು ನಮ್ಮನ್ನೆಲ್ಲ ರಕ್ಷಿಸುತ್ತಿದ್ದಾರೆ. ಅವರ ಸೇವೆ ಸ್ಮರಣೀಯ ಎಂದರು.

ಬಿಜೆಪಿ ಮುಖಂಡ ಡಾ.ಚಂದ್ರಶೇಖರ ಸುಬೇದಾರ ಮಾತನಾಡಿ, ಸಂಗೀತ ಮಾನವ ಕುಲದ ಬೆಳವಣಿಗೆಗೆ ಸಹಕಾರಿಯಾಗಿದೆ. ಸಂಗೀತ ನಿಸ್ವಾರ್ಥವಾಗಿದೆ. ಸಂಗೀತವನ್ನು ನಮ್ಮ ದೇಶಕ್ಕೆ ನಾರದ ಮಹಷರ್ಿಗಳಿಂದ ಪರಿಚಯಗೊಂಡಿದ್ದು, ಅದರಿಂದ ಮನಸ್ಸುನ್ನು ಹಗುರ ಮಾಡಿಕೊಳ್ಳಬಹುದು ಎಂದು ಹೇಳಿದರು.

ಡಾ.ಇಂದಿರಾ ಉಪ್ಪಿನ್, ಯೋಗಗುರು ನರಸಿಂಹ ವೈದ್ಯ, ಬಿಎಸ್ಎಫ್ ಯೋಧ ದುರ್ಗಪ್ಪ ನಾಯಕ, ಗುರು ಕಾಮಾ, ಮಲ್ಲಿಕಾಜರ್ುನ ಮುದ್ನೂರ, ಟ್ರಸ್ಟ್ ಅಧ್ಯಕ್ಷೆ ಗಂಗಾ ಗೀಗಿ, ಕಾರ್ಯದಶರ್ಿ ರಾಘವೇಂದ್ರ ಪತ್ತಾರ, ಸಂಗನಗೌಡ ಪಾಟೀಲ್ ಅನವಾರ, ವೀರೇಶ ಉಳ್ಳಿ, ಟ್ರಸ್ಟ್ ಅಧ್ಯಕ್ಷೆ ಗಂಗಾ ಸಿ.ಗೋಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net