ದೇಶಪ್ರೇಮಿಗಳ ಸ್ಮರಣೆ ಆದ್ಯ ಕರ್ತವ್ಯ

15BRG1
Published on

ಬೋರಗಾಂವ: ಜಗತ್ತನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶ ಭಾರತವಾಗಿದ್ದು, ಸ್ವಾತಂತ್ರ‍್ಯಕ್ಕಾಗಿ ನಡೆದ ಸಾವಿರಾರು ದೇಶಪ್ರೇಮಿಗಳ ಬಲಿದಾನ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.

ಪಟ್ಟಣದ ಪ್ರಾಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶುಕ್ರವಾರ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪಟ್ಟಣದ ಅರಿಹಂತ ಸಹಕಾರಿ ಜವಳಿ ಗಿರಣಿಯಲ್ಲಿ ಉದ್ಯಮಿ ಅಭಿನಂದವ ಪಾಟೀಲ, ಅರಿಹಂತ ಸಹಕಾರಿ ಸಂಸ್ಥೆಯಲ್ಲಿ ಸಂಸ್ಥೆ ನಿರ್ದೇಶಕ ಸುಭಾಶ ಶೆಟ್ಟಿ, ಅರಿಹಂತ ಮರಾಠಿ ಹಾಗೂ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಯುವ ಮುಖಂಡ ಉತ್ತಮ ಪಾಟೀಲ, ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಅಧ್ಯಕ್ಷ ಪಿಂಟು ಕಾಂಬಳೆ, ಆರ್.ಎ.ಪಾಟೀಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿರ್ದೇಶಕಿ ಮೀನಾಕ್ಷಿ ಪಾಟೀಲ ಧ್ವಜಾರೋಹಣ ನೆರವೇರಿಸಿದರು.

ರಾಷ್ಟ್ರೀಯ ಜುಡೋ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net