ದೇಶದಲ್ಲಿ ಮಿಕ್ಕುಳಿಯುವಷ್ಟು ಆಹಾರ ಉತ್ಪಾದನೆ

IMG-20220918-WA0079
Published on

ಕಲಬುರಗಿ: ದೇಶದಲ್ಲಿ ಆಹಾರಉತ್ಪಾದ್ರದನೆ ಪ್ರಮಾಣ ಹೆಚ್ಚಳವಾಗಿದ್ದು, ದೇಶದ ಜನರು ಊಟ ಮಾಡಿ ಉಳಿಯುವಷ್ಟು ಆಹಾರ ಉತ್ಪಾದನೆ ಆಗುತ್ತಿದೆ. ಅದನ್ನು ವಿದೇಶಕ್ಕೆ ಕಳುಹಿಸಿ ರೈತರ ಆದಾಯ ಹೆಚ್ಚಿಸಿ, ಸ್ವಾವಲಂಭಿ ಭಾರತ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಗುಲ್ಬರ್ಗ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿAದ ಭಾನುವಾರ ಏರ್ಪಡಿಸಿದ್ದ ಗ್ರಾಮಿಣ ಯುವಕ, ಯುವತಿಯರಿಗೆ ಸ್ವಾವಲಂಭಿ ಗ್ರಾಮದ ಪ್ರಶಿಕ್ಷಣ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಖಾದ್ಯ ತೈಲ ವಿದೇಶದಿಂದ ತರುತ್ತಿದ್ದು, ಪಾಮ್ ಆಯಿಲ್ ತಿನ್ನುತ್ತಿz್ದೆÃವೆ. ನಮ್ಮ ಹಳ್ಳಿಗಳ ಎಣ್ಣೆಗಾಣಗಳಿಗೆ ಪ್ರೋತ್ಸಾಹ ನೀಡಿ, ಆ ಎಣ್ಣೆಯನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಭಾರತ ೧ನೇ ಸ್ಥಾನದಲ್ಲಿ ಇರಬೇಕು ಎಂದು ಯೋಚಿಸುತ್ತಿz್ದÉÃವೆ. ಆದರೆ ಕಲ್ಯಾಣ ಕರ್ನಾಟಕದಲ್ಲಿ ಈ ಭಾವನೆ ಮೂಡಬೇಕು. ಇಲ್ಲಿನ ಮಣ್ಣು ಫಲವತ್ತಾಗಿದೆ, ಬುದ್ಧಿವಂತರ ಸಂಖ್ಯೆ ಹೆಚ್ಚಿದೆ, ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಶೇ.೩೦ ಇಂಜಿನಿಯರ್‌ಗಳು ಈ ಭಾಗದವರೇ ಇದ್ದಾರೆ. ಆದರೆ ಆತ್ಮವಿಸ್ವಾಸದ ಕೊರತೆಯಿಂದ ಅವುಗಳ ಸದ್ಬಳಕೆ ಆಗುತ್ತಿಲ್ಲ. ಎಲ್ಲರೂ ಅವರವರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ಭಾರತ ೧ನೇ ಸ್ಥಾನಕ್ಕೆ ಏರುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಸಂಘದ ಶಿಕ್ಷಣ ಉಪಸಮಿತಿ ಅಧ್ಯಕ್ಷೆ ಲೀಲಾ ಕಾರಟಗಿ ಮಾತನಾಡಿ, ಹಳ್ಳಿ ಹೆಸರು ಹೇಳಲು ಯುವಕರಲ್ಲಿ ಕೀಳರಿಮೆ ಹಿಂಜರಿಕೆ ಇದ್ದು, ತಂದೆ ತಾಯಿ ಒಕ್ಕಲುತನ ಮಾಡುತ್ತಾರೆ ಎಂದು ಹೇಳಲು ಹಿಂಜರಿಕೆ ಇದ್ದು, ಈ ಭಾವ ದೂರಾಗಬೇಕು. ಒಕ್ಕಲುತನ ಹೆಮ್ಮೆಯ ವಿಷಯವಾಗಬೇಕು. ಈ ನಿಟ್ಟಿನಲ್ಲಿ ಗ್ರಾಮಗಳ ಅಭ್ಯುದಯಕ್ಕಾಗಿ ಏಳು ಜಿಲ್ಲೆಗಳಲ್ಲಿ ೧೧ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. ೨೦ ಸಾವಿರ ಯುವಕ ಯುವತಿಯರ ಮನಸ್ಸಿನ ಬದಲಾವಣೆಗೆ ಈ ಕಾರ್ಯಕ್ರಮಗಳು ಪ್ರೇರಣೆ ನೀಡಲಿವೆ. ಮೂರು ದಿನದ ಬೃಹತ್ ಕಾರ್ಯಾಗಾರ ನಡೆಸುವ ಚಿಂತನೆ ಇದೆ ಎಂದರು.
ಹಳ್ಳಿ ತತ್ವ ಅರಿತು ಬೆಳೆಯಬೇಕು. ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಡೆಯಬೇಕು. ಹಳ್ಳಿಗಳ ದುಸ್ಥಿತಿಗೆ ಕಾರಣ ಏನು ಎಂಬುದರ ಕಾರಣದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಶುದ್ಧ ಬೆಲ್ಲ, ಗಾಣದ ಎಣ್ಣೆ ಸೇರಿ ಹಲವು ಕುಲಕಸುಗಳ ಆಹಾರ ಮರೆಯಾಗುತ್ತಿದೆ. ಸಂಘದಿAದ ಪ್ರಗತಿ ಕೇಂದ್ರ ಸ್ಥಾಪಿಸಿ, ಮಾತೆಯ ಮೂಲಕ ಮಕ್ಕಳಿಗೆ ಕಥೆ ಹೇಳಿ, ಸಂಸ್ಕಾರ ಬಿತ್ತುವ ಕೆಲಸ ಮಾಡಲಾಗುತ್ತಿದೆ ಎಂದರು.
ಗದಗನ ರಾಮಕೃಷ್ಣ ಆಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ಅತ್ಯುತ್ತಮ ವ್ಯಕ್ತಿತ್ವಗಳ ನಿರ್ಮಾಣಕ್ಕಾಗಿ ಬುದ್ಧಿಗೆ ಬೆಳಕು ನೀಡುವುದೇ ಮಹಾನ್‌ಕ್ರಾಂತಿಕಾರಿ ಕಾರ್ಯವಾಗಿದೆ. ಬುದ್ದಿಗೆ ಬೆಳಕು ಇಲ್ಲದಕ್ಕೆ ಯಂಗ್ ಆಗಿ ಇರಬೇಕಿದ್ದ ಯುವ ಪಡೆ ಹೆಂಗೇಗೋ ಉಳಿದಿದೆ. ನನ್ನ ಯೋಗ್ಯತೆ ಏನು ಎಂಬುದು ಅರಿಯಬೇಕು. ವಿಶ್ವವಿದ್ಯಾಲಯ, ಶಾಲೆಗಳಲ್ಲಿ ಬುದ್ದಿಗೆ ಚೈತನ್ಯ ನೀಡುವ ಕೆಲಸ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಬಸವರಾಜ ಮತ್ತಿಮಡು, ಎಂಎಲ್ಸಿಗಳಾದ ಬಿ.ಜಿ.ಪಾಟೀಲ್, ಶಶೀಲ ನಮೋಶಿ, ಪ್ರಮುಖರಾದ ದಯಾನಂದ ಅಗಸರ, ಎಸ್.ಎಸ್.ಪಾಟೀಲ್, ವಿ.ಶಾಂತರೆಡ್ಡಿ, ಮಂಜುಳಾ ಡೊಳ್ಳೆ, ತಿಪ್ಪಣ್ಣರೆಡ್ಡಿ ಕೋಲಿ, ದುರ್ದಾನಾ ಬೇಗಂ, ಹಣಮಂತ ತೆಗನೂರ, ಶಿವರಾಜ ಪಾಟೀಲ್ ರz್ದÉÃವಾಡಗಿ, ಪ್ರವೀಣ ತೆಗನೂರ, ಮಲ್ಲಿಕಾರ್ಜುನ ಪಾಟೀಲ್ ಇತರರಿದ್ದರು.


೨೦೨೩ ಜಾಗತಿಕ ಸಿರಿಧಾನ್ಯ ವರ್ಷ
೨೦೨೩ ಜಾಗತಿಕ ಸಿರಿಧಾನ್ಯ ವರ್ಷ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದ್ದು, ನಾವು ಉಣ್ಣುತ್ತಿರುವ ಜೋಳ, ರಾಗಿ ಸೇರಿ ಸಿರಿಧಾನ್ಯಗಳನ್ನು ವಿಶ್ವದ ಎಲ್ಲೆಡೆ ತಿನ್ನಿಸಿ, ಆರೋಗ್ಯಕ್ಕೆ ಕೊಡುಗೆ ನೀಡಬೇಕು. ಜೋಳ, ಸಜ್ಜೆ, ನವಣೆ, ರಾಗಿ ವಿದೇಶಕ್ಕೆ ಕಳುಹಿಸಬಹುದು. ಆಹಾರ ಧಾನ್ಯಗಳ ಬಹುಖಾದ್ಯ ತಯಾರಿಸಿ, ಎಫ್‌ಪಿಒ, ಸ್ಟಾರ್ಟ್ ಅಪ್ ಆರಂಭಿಸಬೇಕು. ತಿನ್ನುವ ಅನ್ನ ವ್ಯರ್ಥ ಮಾಡಲು ಯಾರಿಗೂ ಅಧಿಕಾರವಿಲ್ಲ. ಆಹಾರ ಧಾನ್ಯ ರಕ್ಷಣೆಗಾಗಿಯೇ ಕೇಂದ್ರ ಸರ್ಕಾರದಿಂದ ಶೀಥಲೀಕರಣ ಘಟಕ, ಉಗ್ರಾಣ, ಮಣ್ಣು ಪರೀಕ್ಷೆ ಸೇರಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ವಸುದೈವ ಕುಟುಂಬಕA ಎಂಬ ಧ್ಯೇಯದಂತೆ ಇಡೀ ಪ್ರಪಂಚ ಭಾರತದ ಸಿರಿಧಾನ್ಯಕ್ಕೆ ಮೊರೆ ಹೋಗುವಂಥ ಸ್ಥಿತಿ ಬಂದಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ರೈತರ ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವೆ  ಶೋಭಾ ಕರಂದ್ಲಾಜೆ ತಿಳಿಸಿದರು.


ಸಂವಾದದಲ್ಲಿ ಕೇಳಿದ ಸಲಹೆ
ಭ್ರಷ್ಟಾಚಾರ ಕಡಿಮೆ ಆಗಬೇಕು, ಪ್ರತಿಯೊಬ್ಬರೂ ಕಾಯಕಯೋಗಿಗಳು ಆಗಬೇಕು, ಆರ್ಥಿಕತೆ ಆಧಾರದಲ್ಲಿ ಮೀಸಲಾತಿ ದೊರೆಯಬೇಕು.... ಗ್ರಾಮ ವಿಕಾಸ ತಜ್ಞ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆಗಾರ ಡಾ.ಎಂ.ಎ.ಬಾಲಸುಬ್ರಮಣ್ಯ ಮಾತನಾಡುವ ವೇಳೆ ಕೇಳಿದ ಪ್ರಶ್ನೆಗೆ ಬಂದ ಸಲಹೆಗಳು ಇವು. ಮಹಿಳೆಯೊಬ್ಬರು ಮಹಿಳಾ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು. ನೀವು ಆಗುತ್ತೀರಾ ಎಂಬ ಮರುಪ್ರಶ್ನೆಗೆ ಅದಕ್ಕಾಗಿಯೇ ಬಂದಿz್ದÉÃನೆ ಎಂದು ದಿಟ್ಟ ಉತ್ತರ ನೀಡಿದರು.  ಈ ವೇಳೆ ಮಾತನಾಡಿದ ಡಾ.ಎಂ.ಎ.ಬಾಲಸುಬ್ರಮಣ್ಯ, ಮಾನವ ಅಭಿವೃದ್ಧಿಗೆ ಆರೋಗ್ಯ, ಶಿಕ್ಷಣ, ಆದಾಯ ನಿರ್ಣಾಯಕವಾಗಿದ್ದು, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶ ೧೨೧ನೇ ಸ್ಥಾನದಲ್ಲಿದೆ. ನಗರ ಭಾಗದ ಅದೆಷ್ಟೋ ಜನರಿಗೆ ಆರೋಗ್ಯ ಕೇಂದ್ರದ ಅರಿವಿಲ್ಲ. ಹಳ್ಳಿಗಳಲ್ಲಿ ಸರ್ಕಾರಿ ಆಸ್ಪತ್ರೆಗೆ ಜನರು ಮುಗಿ ಬೀಳುತ್ತಿದ್ದಾರೆ. ಈ ವ್ಯತ್ಯಾಸ ಅರಿಯಬೇಕು.


ಗಿರಿಜನರಲ್ಲಿ ಒಬ್ಬರೇ ಭಿಕ್ಷುಕರು ಇಲ್ಲ. ಅದು ಸ್ವಾವಲಂಭಿ ಪ್ರಕೃತಿ ಪ್ರೀತಿಯ ಜೀವನಕ್ಕೆ ಸಾಕ್ಷಿ. ಸ್ವಾವಲಂಭಿ ಜೀವನ ಅಹಂ ತರಿಸುತ್ತದೆ, ಅವಲಂಭಿ ಜೀವನಕ್ಕಿಂತ ಪರಸ್ಪರ ಅವಲಂಭಿ ಇರಬೇಕು. ಆಗ ಎಲ್ಲರೂ ಕೂಡಿಕೊಂಡು ಸಾಗಲು ಮನಸು, ಹೃದಯಗಳು ಒಂದಾಗಬೇಕು.
| ಡಾ.ಎಂ.ಎ.ಬಾಲಸುಬ್ರಮಣ್ಯ, ಸಲಹೆಗಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ


೧೫ನೇ ಶತಮಾನದಲ್ಲಿ ಮೈಮೇಲಿನ ಹೇನು ತೆಗೆಯಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲದ ಯುರೋಪಿಯನ್ನರ ಬಗ್ಗೆ ಶ್ರೀಮಂತ ಪರಂಪರೆಯ ನಮ್ಮ ದೇಶದ ಬಗ್ಗೆ ಮಕ್ಕಳಿಗೆ ತಿಳಿಸಲೇ ಇಲ್ಲ. ಅಂಥವರ ಅನುಕರಣೆ ನಾವು ಮಾಡುತ್ತಿz್ದÉÃವೆ. ಕಣ್ಣೀರು, ಹತಾಶೆ, ಅವಮಾನ ದೇವರು ನೀಡಿದ ವರಗಳು. ಅವುಗಳನ್ನು ಮೀರಿ, ಸ್ಫೂರ್ತಿ ಪಡೆಯಬೇಕು.
| ಶ್ರೀ ನಿರ್ಭಯಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮ ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net