ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುವುದೇ ಕಾಂಗ್ರೆಸ್ ಉದ್ದೇಶ, ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

28dbp3
Published on

ದೊಡ್ಡಬಳ್ಳಾಪುರ: ಜನ ವಿರೋಧಿ ನೀತಿಯಿಂದ ಭಯೋತ್ಪಾದಕರ ಪರವಾಗಿ ಕೆಲಸ ಮಾಡುವುದೇ ಕಾಂಗ್ರೆಸ್ ಕೆಲಸವಾಗಿದೆ. ಇದರಿಂದಾಗಿ ದೇಶದಲ್ಲಿ ಅಧಿಕಾರ ಕಳೆದುಕೊಂಡರೂ ಅಹಂಕಾರ ಬಿಟ್ಟಿಲ್ಲ. ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುವುದೇ ಕಾಂಗ್ರೆಸ್ ಉದ್ದೇಶ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಆರೋಪಿಸಿದರು.

ಕಾಂಗ್ರೆಸ್ ನೀತಿಗಳ ವಿರುದ್ಧ ತಾಲೂಕು ಬಿಜೆಪಿ ಘಟಕ ತಾಲೂಕು ಕಚೇರಿ ಎದುರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ವಿಧಾನಸಭೆ ಅಧಿವೇಶನ ಅಮೂಲ್ಯ ಸಮಯ ಹಾಳು ಮಾಡಿರುವ ಕಾಂಗ್ರೆಸ್ ನಾಯಕರು, ರಾಷ್ಟ್ರಧ್ವಜ ಹಿಡಿದು ಸದಸನದಲ್ಲೆ ಪ್ರತಿಭಟನೆ ಮಾಡುವ ಮೂಲಕ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜು ಮಾತನಾಡಿ, ಹಿಜಾಬ್ ಕೇಸರಿ ಶಾಲು ವಿವಾದವನ್ನು ಕಾಂಗ್ರೆಸ್ ಬುಗಿಲೆಬ್ಬಸಿದೆ. ಜನರ ತೆರಿಗೆ ಹಣ ಪೋಲಾಗುವಂತೆ ನಡೆಸಿಕೊಂಡಿದೆ. ಇದರಿಂದ ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ. ಸ್ವಾರ್ಥಕ್ಕಾಗಿ ಜನ ಹಿತ ಮರೆತು ಕಾಂಗ್ರೆಸ್ ಧರಣಿ ನಡೆಸಿರುವುದು ಖಂಡನೀಯ ಎಂದರು.

ಸಚಿವ ಕೆ.ಎಸ್.ಈಶ್ವರಪ್ಪ ಮೇಲೆ ವಿನಾಕಾರಣ ಸುಳ್ಳು ಆರೋಪ ಮಾಡುತ್ತಾ 15 ದಿನ ನಡೆಯುವ ವಿಧಾನಸಭೆ ಅಧಿವೇಶನವನ್ನು ಕೇವಲ ಎರಡು ದಿನಕ್ಕೆ ಮುಗಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕಿದೆ, ರಾಜ್ಯದಲ್ಲಿರುವ ಅನೇಕ ಸಮಸ್ಯೆಗಳ ಕುರಿತು ಚಿಂತಿಸುವ ಅಭಿವೃದ್ಧಿ ಮಾಡುವ ಕೆಲಸ ರೂಪಿಸುವ ಸಮಯವನ್ನು ಹಾಳು ಮಾಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net