ದೇಶದಲ್ಲಿ 158.11 ಕೋಟಿ ಲಸಿಕಾರಣ ಸಾಧನೆ

h18-Fhatima
Published on

ಹುಬ್ಬಳ್ಳಿ: ದೇಶದಲ್ಲಿ ಈಗಾಗಲೇ 158.11 ಕೋಟಿ ಜನರಿಗೆ ಲಸಿಕಾಕರಣ ಮಾಡಲಾಗಿದೆ. 3.73 ಕೋಟಿ ಲಸಿಕೆಯನ್ನು 15-17 ವರ್ಷದೊಳಗಿನ ಮಕ್ಕಳಿಗೆ ನೀಡಲಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ 9.17 ಕೋಟಿ ಲಸಿಕೆಯ ಗುರಿ ತಲುಪಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಕೇಶ್ವಾಪುರದ ಫಾತಿಮಾ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬೃಹತ್ ಗುರಿ- ಸಾಟಿಯಿಲ್ಲದ ಸಾಧನೆ ಭಾರತ ದೇಶದ ಪಯಣ 100 ಕೋಟಿ ಲಸಿಕಾರಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 15,48,824 ಮೊದಲ ಡೋಸ್ ಲಸಿಕೆ ಹಾಗೂ 11,96,000 ಎರಡನೇ ಡೋಸ್ ಲಸಿಕೆ ಹಾಕಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸುಮಾರು 27,54,350 ಲಸಿಕೆ ಗುರಿ ಸಾಧಿಸಲಾಗಿದೆ. ಮಾರ್ಚ್ ವೇಳೆಗೆ 12-15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net