

ಬಾಗಲಕೋಟೆ : ಉತ್ತಮ ಪ್ರಜಾಪ್ರಭುತ್ವ ಹೊಂದಿರುವ ನಮ್ಮ ರಾಷ್ಟçದಲ್ಲಿ ದೇಶದ ಹಿತಕ್ಕಾಗಿ ಮತನೀಡುವ ಮತದಾರರ ಪಾತ್ರ ಮಹತ್ವದ್ದಾಗಿದೆ ಎಂದು ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹೇಳಿದರು.
ಅವರು ಬಿ.ವ್ಹಿ.ವ್ಹಿ.ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐ. ಕ್ಯೂ. ಎ. ಸಿ ಘಟಕದ ಅಡಿಯ ಚುನಾವಣಾ ಸಾಕ್ಷರತಾ ಘಟಕ ಹಾಗೂ ಭಾರತೀಯ ಚುನಾವಣಾ ಆಯೋಗದ ಸಹಯೋಗದಲ್ಲಿ ಮತದಾರ ಜಾಗೃತಿ ಹಾಗೂ ನವ ಮತದಾರರ ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾನ ರಾಷ್ಟ್ರೀಯ ಹಿತಾಸಕ್ತಿಯನ್ನು ಬಯಸುವುದು. ಅದರಲ್ಲೂ ದೇಶದ ವ್ಯವಸ್ಥಿತ ಆಡಳಿತದಲ್ಲಿ ಮತದಾರರ ಪಾತ್ರ ಅತ್ಯಂತ ಹಿರಿದಾದದು. ಅದರಲ್ಲೂ ನವ ಮತದಾರರು ದೇಶದ ಪ್ರಗತಿಯಲ್ಲಿ ಆಸಕ್ತಿವಹಿಸಿ ಮತದಾನ ಮಾಡಿ ತಮಗೆ ಬೇಕಾದಂತಹ ಸರ್ಕಾರಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶಗಳಿವೆ ಎಂದು ತಿಳಿಸಿದರು.
ಬಾಗಲಕೋಟೆಯ ತಹಸಿಲ್ದಾರ ಅಮರೇಶ ಪಮ್ಮಾರ ಮತದಾನ ಜಾಗೃತಿಯನ್ನು ಕುರಿತು ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಗನ್ನಾಥ. ವಿ. ಚವ್ಹಾಣ, ಆಯ್. ಕ್ಯೂ. ಎ. ಸಿ ಸಂಯೋಜಕರಾದ ಶ್ರೀಮತಿ ಗಿರಿಜಾ ನಾವದಗಿ, ಹಿರಿಯ ಉಪನ್ಯಾಸಕರಾದ ಡಾ. ಎಂ. ನಂಜುAಡಸ್ವಾಮಿ ಹಾಗೂ ಬೋಧಕ ಬೋಧಕ್ಕೆ ತರ ಸಿಬ್ಬಂದಿಯವರು ಉಪಸ್ಥಿತರಿದ್ದರು.