ದೇಶದ ಸ್ವಾತಂತ್ರೃಕ್ಕಾಗಿ ಸಾವರ್ಕರ್ ಅವಿರತ ಹೋರಾಟ

1
Published on

ಮೈಸೂರು: ವೀರ ಸಾವರ್ಕರ್ ಯುವ ಬಳಗದಿಂದ ನಗರದಲ್ಲಿ ಭಾನುವಾರ ಸಾವರ್ಕರ್ ಜಯಂತಿ ಹಾಗೂ ನೂತನ ಸಂಸತ್ ಭವನ ಉದ್ಘಾಟನೆ ಅಂಗವಾಗಿ ಸಂಭ್ರಮ ಆಚರಿಸಲಾಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ (ಮೆಟ್ರೋಪೋಲ್) ವೃತ್ತದ ಬಳಿ ಸಾವರ್ಕರ್ ಹಾಗೂ ಸಂಸತ್ ಭವನದ ಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಬಳಗದ ಅಧ್ಯಕ್ಷ ರಾಕೇಶ್ ಭಟ್ ಮಾತನಾಡಿ, ಬ್ರಿಟಿಷರು ಕರಿನೀರಿನ ಶಿಕ್ಷೆ ಕೊಟ್ಟರೂ ಸಾವರ್ಕರ್ ಕುಗ್ಗಲಿಲ್ಲ. ದೇಶದ ಸ್ವಾತಂತ್ರೃಕ್ಕಾಗಿ ಅವಿರತ ಹೋರಾಟ ಮಾಡಿದರು. ಆದರೆ ಹಲವು ಕಾರಣಕ್ಕೆ ಕೆಲವು ಸ್ವದೇಶೀಯರೇ ಸಾವರ್ಕರ್ ಅವರನ್ನು ಅವಮಾನಿಸುತ್ತಾ ಬಂದಿದ್ದರು ಎಂದರು.
ಈಗ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಸಾವರ್ಕರ್ ಜನ್ಮ ದಿನದಂದೇ ಉದ್ಘಾಟಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ ಎಂದರು.
ವಿವಿಧ ಸಂಘಟನೆಗಳ ಮುಖಂಡರಾದ ಮೈ.ಕಾ.ಪ್ರೇಮ್ ಕುಮಾರ್, ಸಂಜಯ್, ಮಧು ಸೋಮಣ್ಣ, ರಾ. ಪರಮೇಶ್‌ಗೌಡ, ಸಂದೇಶ ಪವಾರ್, ಕಾರ್ಯದರ್ಶಿ ಎನ್.ದೀಪಕ್, ಸದಸ್ಯರಾದ ವಿಕ್ರಮ್ ಅಯ್ಯಂಗಾರ್, ಜಯಸಿಂಹ, ಟಿ.ಪಿ.ಮಧುಸೂಧನ್, ಟಿ.ಎಸ್.ಅರುಣ್, ಶಶಿಕಾಂತ್, ಪ್ರತಾಪ್, ಉಮೇಶ್, ಹರೀಶ್‌ಗೌಡ, ಸುರೇಂದ್ರ, ವಿಜ್ಞೇಶ್ವರ ಭಟ್, ಶಿವರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net