ದೇಶದ ಸುರಕ್ಷತೆಯೇ ಬಿಜೆಪಿ ಮೂಲ ಉz್ದೆÃಶ

ydg02
Published on

ಕೊಡೇಕಲ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ೧೦ ಕೋಟಿಗೂ ಅಧಿಕ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಹೇಳಿದರು.

ಭಾರತೀಯ ಜನತಾ ಪಕ್ಷ ಸುರಪುರ-ಹುಣಸಗಿ ಮಂಡಲದಿAದ ಸೋಮವಾರ ರಾಜನಕೋಳೂರ ಗ್ರಾಮದಲ್ಲಿ ಹಮ್ಮಿಕೊಂಡ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ಅಧಿಕ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಮಾಡುವ ಉz್ದÉÃಶದಿಂದ ಹಿಂದುಳಿದ ವರ್ಗಗಳಿಗೆ ವಿಶೇಷವಾದ ಯೋಜನೆ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಪ್ರತಿ ಮತಕ್ಷೇತ್ರದಿಂದ ೪೦ ಸಾವಿರ ಸದಸ್ಯತ್ವ ಮಾಡುವುದು ಪ್ರತಿ ಬೂತ್ ಮಟ್ಟದಲ್ಲಿ ಸುಮಾರು ೩೦೦ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ. ಸದಸ್ಯತ್ವ ಪಡೆದುಕೊಳ್ಳಲು ಈ ನಂ.೮೮೦೦೦೦೨೦೨೪ ಮಿಸ್‌ಕಾಲ್ ಮಾಡಿ ಸದಸ್ಯತ್ವ ಪಡೆದುಕೊಳ್ಳಬಹುದು. ಪಕ್ಷದ ಮುಖಂಡರು ಹಾಗೂ ಕರ‍್ಯಕರ್ತರು ಸೇರಿ ಪ್ರತಿ ಬೂತ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪ್ರಧನಾ ಕರ‍್ಯದರ್ಶಿ ಮೇಲಪ್ಪ ಗುಳಗಿ, ಹುಣಸಗಿ ಮಂಡಲ ಅಧ್ಯಕ್ಷ ಸಂಗಣ್ಣ ವೈಲಿ, ಎಚ್.ಸಿ.ಪಾಟೀಲ್, ಚಂದ್ರಶೇಖರಗೌಡ ಮಾಗನೂರ, ಸಂಗನಗೌಡ ಮಾಗನೂರ, ಬಸನಗೌಡ ಅಳ್ಳಿಕೋಟಿ, ರಂಗನಾಥ ದೋರಿ, ವೀರಸಂಗಪ್ಪ ಹಾವೇರಿ, ಬಾಬುಗೌಡ ವಠಾರ, ಮಲ್ಲಿಕಾರ್ಜುನಗೌಡ ಮುರಾಳ, ರಾಮನಗೌಡ ವಠಾರ, ಸೋಮನಗೌಡ ಗುಳಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net