

ಬಸವಕಲ್ಯಾಣ: ವಿಶ್ವದಲ್ಲಿಯೇ ಶ್ರೇಷ್ಠ ಪರಂಪರೆ, ಸಂಸ್ಕೃತಿ ಹೊಂದಿದ ದೇಶ ಭಾರತ ಎಂದು ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಹೇಳಿದರು.
ನಿರಗುಡಿ ಗ್ರಾಮದಲ್ಲಿ ಗುರುಪೂರ್ಣಿಮೆ ನಿಮಿತ್ತ ಗದ್ದೆ ಲಕ್ಷ್ಮೀದೇವಿ ಮತ್ತು ಭಾಗ್ಯವಂತಿ ದೇವಸ್ಥಾನ ಹಿರೇಮಠ ಸಹಯೋಗದಲ್ಲಿ ಪೂಜ್ಯ ಭಾಗ್ಯವಂತಿ ದೇವಿ ಅವರ ಸಾನ್ನಿಧ್ಯದಲ್ಲಿ ಗುರುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರು ಮಾರ್ಗದರ್ಶನದಲ್ಲಿ ನಡೆದಾಗ ಜೀವನದಲ್ಲಿ ಶಾಂತಿ, ಸಮೃದ್ಧಿ ಕಾಣಲು ಸಾಧ್ಯ ಎಂದರು.
ಪೂಜ್ಯ ಭಾಗ್ಯವಂತಿ ಮಾತಾಜಿ ಅವರ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ. ಗೋವುಗಳನ್ನು ಕಾಳಜಿಯಿಂದ ನೋಡಿಕೊಳ್ಳುವ ಜತೆಗೆ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಅವರ ಸಾಮಾಜಿಕ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಸುಭಾಷ ಕಲ್ಲೂರು ಮಾತನಾಡಿ, ಜೀವನದಲ್ಲಿ ಗುರುಗಳ ಮಾರ್ಗದರ್ಶನ ಮತ್ತು ಆಶೀರ್ವಾದ ಅವಶ್ಯಕ. ಜೀವನದಲ್ಲಿ ಸತ್ಕಾರ್ಯ ಮಾಡುವರ ಮೇಲೆ ಸದಾ ದೇವರ ಕೃಪಾಶೀರ್ವಾದ ಇರುತ್ತದೆ. ಹೀಗಾಗಿ ಸದಾ ಒಳ್ಳೆಯ ಕಾರ್ಯಗಳನ್ನು ಮಾಡುವುದನ್ನು ರೂಢಿಸಿಕೊಳ್ಳಬೇಕಿದೆ ಎಂದರು.
ಸಮ್ಮುಖ ವಹಿಸಿದ್ದ ನಾರಾಯಣಪುರ ಸಾಯಿ ಆಶ್ರಮದ ಪೂಜ್ಯ ಲಲಿತಾಕುಮಾರಿ ಮಾತನಾಡಿ, ಜೀವನದಲ್ಲಿ ಎದುರಾಗುವ ಅನೇಕ ಕಷ್ಟ ನಷ್ಟಗಳಿಗೆ ಪರಿಹಾರ ಸಿಗಬೇಕಾದರೆ ಗುರುವಿನ ಆರಾಧನೆ ಮಾಡಬೇಕು ಮತ್ತು ಮಾತಾಜಿ ಅವರ ಆಶೀರ್ವಾದ ಪಡೆಯುವುದು ಅವಶ್ಯವಾಗಿದೆ ಎಂದರು.
ಹುಮನಾಬಾದ್‌ನ ಬಸವರಾಜ ಆರ್ಯ, ಸಂತೋಷ ಪಾಟೀಲ್, ಕಲಬುರಗಿಯ ನವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ್, ಉದ್ಯಮಿ ಸಂಜುಕುಮಾರ ಸುಗರೆ, ಸಿದ್ರಾಮಪ್ಪ ಪಾಟೀಲ ಆಳಂದ, ಬಾಲಾಜಿ ಚಂಡಕಾಪುರೆ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮ ಗುದಗೆ, ಹರಿಶ್ಚಂದ್ರ ಪಾಟೀಲ್ ನಿರಗುಡಿ, ರಮಾಕಾಂತ ಪಾಟೀಲ್, ಸಂತೋಷ ಬಿರಾದಾರ ನಿರಗುಡಿ, ಮಾಣಿಕ ಸುಂಠಾಣೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಸುಗಲಾಬಾಯಿ ಅಮೃತ್ತಪ್ಪ ಧುತ್ತರಗಾಂವ ಇವರಿಂದ ಭಾಗ್ಯವಂತಿ ಮಾತಾಜಿ ಅವರ ೧೧ನೇ ತುಲಾಭಾರ ಸೇವೆ ಜರುಗಿತು.
ಶರಬಸ್ಸಪ್ಪ ಎಂ.ಮಂಡೆ ಸ್ವಾಗತಿಸಿದರು ರಮಾಕಾಂತ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಧುತ್ತರಗಾಂವ ನಿರೂಪಣೆ ಮಾಡಿದರು. ಸಂಗೀತ ಕಲಾವಿಧರಾದ ಸುಭಾಷ ಕಲಖೋರಾ, ಮಾಂತಯ್ಯ ಸ್ವಾಮಿ, ಬಾಬು ಸಜ್ಜನ, ಕಲ್ಯಾಣರಾವ ಮದರಗಾಂವಕರ್, ಆನಂದ ಪಂಚಂಗೆ, ವಿಜಯಶ್ರೀ ಶೀಲವಂತ, ಅಭಿಷೇಕ ಹಾಗೂ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು.