

ಚಿಂಚೋಳಿ: ದೇಶದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಮಾತೆಯರ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ತಾಯಂದಿರು ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕು ಎಂದು ಚೌಡಾಪುರದ ಶ್ರೀ ವೀರಮಹಾಂತೇಶ್ವರ ಶಿವಾಚಾರ್ಯರು ಹೇಳಿದರು.
ಶ್ರೀ ಪವಾಡ ಪುರುಷ ಮಹಾಂತೇಶ್ವರ ಮಠದ ಸಭಾಂಗಣದಲ್ಲಿ ಛತ್ರಪತಿ ಶಿವಾಜಿ ಯುವ ಮಂಡಳಿಯಿAದ 8ನೇ ವರ್ಷದ ಗಣೇಶೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಯುವಶಕ್ತಿ ಜಾಗೃತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅವಶ್ಯಕತೆಗೂ ಮೀರಿ ಟಿವಿ, ಮೊಬೈಲ್ ಬಳಕೆ ಮಾಡುವುದರಿಂದಲೇ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಕೂಡಲೇ ನಾವೆಲ್ಲ ಬದಲಾಗಬೇಕು. ದೇಶದ ಪರಂಪರೆ, ಸನಾತನ ಧರ್ಮದ ಉಳಿವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ರಟಕಲ್ ವಿರಕ್ತ ಮಠದ ಪೀಠಾಧಿಪತಿ ಶ್ರೀ ಸಿದ್ಧರಾಮ ದೇವರು ಮಾತನಾಡಿದರು. ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳ ಭಾವಚಿತ್ರವುಳ್ಳ ಮಹಾದ್ವಾರವನ್ನು ಡಾ.ಬಸವೇಶ ಪಾಟೀಲ್, ನಿವೃತ್ತ ಸೈನಿಕ ರಾಜೇಂದ್ರಪ್ರಸಾದ ಉದ್ಘಾಟಿಸಿದರು.
ಪ್ರಮುಖರಾದ ಶಾಂತವೀರ ಸುಂಕದ, ಸಂಗಪ್ಪ ಪಾಲಮೂರ, ನಾಗೇಶ ಭದ್ರಶೆಟ್ಟಿ, ಸಂತೋಷ ಗಡಂತಿ, ನಾಗಪ್ಪ ಮೈಲ್ವಾರ, ನಾಗರಾಜ ಮಲಕೂಡ, ಸಂಕೇತ ಬಬಲಾದ, ಕಿರಣ ಪಂಚಾಳ, ಗಿರಿರಾಜ ನಾಟೀಕಾರ, ವಸಂತ ಇಟಗಿ, ಹಣಮಂತ ಕೋರಿ, ಶರಣು ಮೇಧ, ಆನಂದ ಗೌಳಿ, ಅಮರ ಬಬಲಾದಿ, ವೆಂಕಟೇಶ ತಂಬಾಕು, ಉದಯಕುಮಾರ, ಶಂಕರ ಮಠಪತಿ, ಆಕಾಶ, ಶರ್ಮಾ ಮಾರವಾಡಿ, ಲಕ್ಷö್ಮಣ ದರವೇಶ, ಸುದರ್ಶನ ಕಳಸ್ಕರ್, ಹಣಮಂತರಾವ ಕೋರಿ ಇತರರಿದ್ದರು.