ದೇಶದ ರಸ್ತೆ ಸಂಚಾರ ಸುಧಾರಣೆಯಲ್ಲಿ ಅಟಲ್ ಪಾತ್ರ ಹಿರಿದು

CTD BJP ATAL (1)--03
Published on

ಚಿತ್ರದುರ್ಗ: ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಅಧಿಕಾರಾವಧಿ ಉತ್ತಮ ಆಡಳಿತ ನೀಡಿದ್ದರು ಎಂದು ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ‌್ಯದರ್ಶಿ ಕೆ.ಮಲ್ಲಿಕಾರ್ಜುನ್ ಹೇಳಿದರು. ಪಕ್ಷದ ಕಚೇರಿಯಲ್ಲಿ ಸೋಮವಾರ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು,ಜನಪರ ಆಡಳಿತ ನೀಡಿದ್ದ ಅಟಲ್ ಅವರು, ದೇಶದ ಸಂಚಾರ ವ್ಯವಸ್ಥೆ ಸುಧಾರ ಣೆಯಲ್ಲಿ ಅವರ ಪಾತ್ರ ಅಂತ್ಯಂತ ಹಿರಿದಾಗಿದೆ. ಸರ್ವ ಶಿಕ್ಷಾ ಅಭಿಯಾನದಡಿಯಲ್ಲಿ ಉತ್ತಮ ಶಾಲಾ ಕೊಠಡಿಗಳ ನಿರ್ಮಾಣಕ್ಕೂ ಕಾರಣ ರಾಗಿದ್ದಾರೆ ಎಂದರು.
ಬಿಜೆಪಿ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಫಿ ಮಾತನಾಡಿ,ಅಜಾತ ಶತೃ ಎಂದೇ ಖ್ಯಾತಿ ಪಡೆದ ವಾಜಪೇಯಿಯವರು ಪ್ರಧಾನಿ ಆಗುವ ಮೊದಲು ದೇಶದ ರಸ್ತೆಗಳ ದುಸ್ಥಿತಿಯನ್ನು ಒಮ್ಮೆ ನೆನಪಿಸಿಕೊಳ್ಳ ಬೇಕಿದೆ ಎಂದರು. ದೇಶದ ಬದಲಾವಣೆ,ಅಭಿವೃದ್ಧಿಗೆ ಅಟಲ್ ಅವರು ತಮ್ಮ ಆಡಳಿತಾವಧಿ ವಿಶೇಷ ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.
ನಗರಾಧ್ಯಕ್ಷ ನವೀನ್‌ಚಾಲುಕ್ಯ,ಸಂಪತ್‌ಕುಮಾರ್,ಶಿವಣ್ಣಚಾರ್ ಮತ್ತಿತರ ಪ್ರಮುಖರು ಮಾತನಾಡಿದರು. ಕಲ್ಲೇಶಯ್ಯ,ಮೋಹನ್, ದಗ್ಗೆ ಶಿವಪ್ರಕಾಶ್,ಕಿರಣ್‌ಕುಮಾರ್, ಭರತ್,ಸಂಜು,ಅರುಣಾ,ಪರಶುರಾಮ್,ವಿರುಪಾಕ್ಷ,ತಿಮ್ಮಣ್ಣ,ಅನೂಪ್,ಮಹಾಂತೇಶ್,ಪಾಪಣ್ಣ ಮತ್ತಿತರರು ಇದ್ದರು. ನಾಗರಾಜ್‌ಬೇದ್ರೆ ಸ್ವಾಗತಿಸಿ,ತಿಪ್ಪೇಸ್ವಾಮಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net