

ಬಾಗಲಕೋಟೆ: ಬಸವೇಶ್ವರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ೭೬ನೇ ಗಣರಾಜ್ಯೋತ್ಸವ ಭಾನುವಾರ ಸಡಗರ-ಸಂಭ್ರಮದಿAದ ಆಚರಿಸಲಾಯಿತು.
ನವನಗರದಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ದೇಶದ ಉನ್ನತಿಗಾಗಿ, ರಾಷ್ಟçದ ಜಾಗೃತಿಗಾಗಿ ಒಂದಷ್ಟು ಒಳ್ಳೆಯ ಕೆಲಸ ಮಾಡೋಣ. ೭೬ ವರ್ಷಗಳ ಸುದೀರ್ಘ ದಿನಗಳನ್ನು ಯಾರು ಮರೆಯಬಾರದು. ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ ಪಾತ್ರ ಹಿರಿದು. ದೇಶದ ರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಿರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ರವಿಕುಮಾರ ಪಟ್ಟಣದ, ನಿರ್ದೇಶಕರಾದ ಚಂದ್ರಶೇಖರಗೌಡ ತ. ಪಾಟೀಲ, ಮೋಹನ ಜಿ ವಾಲಿ, ಎಚ್.ಎಸ್.ರಾಠೋಡ, ವೀರಪ್ಪ ವಿ. ಶಿರಗಣ್ಣವರ, ಶ್ರೀಶೈಲ ಚ. ಆರಬ್ಬಿ, ಸುನೀಲ ಕಲಬುರ್ಗಿ, ಶ್ರೀನಿವಾಸ ತಿ. ಬಳ್ಳಾರಿ, ಶರಣಪ್ಪ ಎಸ್.ಹೆರಕಲ್ಲ, ಶಶಿಧರ ಎಸ್.ಜಿಗಳೂರ, ಸಿದ್ದಪ್ಪ ಸಿ ಆಡೀನ, ಶಂಕರ ಎಸ್.ಅರಶಿನಗೋಡಿ, ಶಂಕರಲಿAಗ ಎಂ. ತಪಶೆಟ್ಟಿ, ದುರ್ಗಪ್ಪ ಟಿ. ನಾಯಕ, ಶೈಲಜಾ ಎಂ. ಗುಡಗುಂಟಿ, ಗೀತಾ ಎಸ್.ನಾರಾ, ವೃತ್ತಿಪರ ನಿರ್ದೇಶಕರಾದ, ಬಿ.ಎಂ.ಬಸವನಾಳ, ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾದ ಬಿ.ಜಿ.ಅಂಗಡಿ, ಈರಣ್ಣ ನಾವಲಗಿ, ವಿ.ಸಿ.ಚೌಧರಿ, ಮುಖ್ಯ ಕಾರ್ಯನಿರ್ವಹಣಾಽಕಾರಿ ವಿವೇಕಾನಂದ ಕೇಮಾಳಿ, ಅಽಕಾರಿಗಳಾದ ಬಿ.ಎಸ್. ನಾವಲಗಿ, ಎಸ್.ಬಿ. ಬದಾಮಿ, ಪಿ.ಎನ್. ಹಳ್ಳಿಕೇರಿ, ಎಂ.ಎಸ್. ಗುಡಗುಂಟಿ, ವಿ.ಎಂ. ಹಿರೇಮಠ ಉಪಸ್ಥಿತರಿದ್ದರು.