

ಹಾಸನ: ಪ್ರದಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (ಪಿಎಮ್‌ಇಜಿಪಿ) ದೇಶದ ಯುವಕರ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ದಾರಿ ದೀಪವಾಗಿದೆ ಎಂದು ಎಸ್.ಬಿ.ಐ ಪ್ರಾದೇಶಿಕ ಅಧಿಕಾರಿ ಶಿವಕುಮಾರ್ ಹೇಳಿದರು.
ನಗರದ ಗೋಮತಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಪ್ರದಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದ 2 ನೇ ಬ್ಯಾಂಕರ್‌ಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರುದ್ಯೋಗಿ ಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಸಲುವಾಗಿ ಪ್ರಧಾನ ಮಂತ್ರಿಗಳ ಸೃಜನ ಕಾರ್ಯಕ್ರಮ ಮಹತ್ತರ ಪಾತ್ರವಹಿಸಿದೆ, ಉದ್ಯಮ ಸ್ಥಾಪಿಸಿ ಅಭಿವೃದ್ಧಿ ಹೊಂದಲು ಸಾಧಿಸುವ ಆಸಕ್ತಿ ಮತ್ತು ಛಲ ಇದ್ದಲ್ಲಿ ಯಾ ವುದು ಅಸಾಧ್ಯವಲ್ಲ, ಯುವಕರು ಹೆಚ್ಚು ಈಯೋಜನೆ ಮೂಲಕ ಸಾಲ ಪಡೆದು ತಮ್ಮ ಉತ್ತಮ ಜೀವನರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಪಾರ್ಥಲಿಂಗಯ್ಯ ಮಾತನಾಡಿ, ಬ್ಯಾಂಕ್‌ಗಳ ವ್ಯವಸ್ಥಾಪಕರು ಯೋಜನೆಯ ಫಲಾನುಭವಿಗಳಿಗೆ ಅಗತ್ಯವಿರುವ ಮಾಹಿತಿ ನೀಡಿ ಅವರನ್ನು ಪ್ರೋತ್ಸಾಹಿಸುವ ಜೊತೆಗೆ ಸ್ವಯಂ ಉದ್ಯೋಗಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿ ಈ ಯೋಜನೆ ಎಲ್ಲರಿಗೂ ತಲುಪುವ ನಿಟ್ಟಿನಲ್ಲಿ ಬ್ಯಾಂಕ್ ನೌಕರರು ಸಹ ಶ್ರಮ ವಹಿಸುವ ಅಗತ್ಯವಿದೆ, ಬ್ಯಾಂಕ್ ನೌಕರರು ಫಲಾನುಭವಿ ಗಳಿಗೆ ಸಂಪೂರ್ಣ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಉದ್ಯಮಿಗಳಿಗೆ ಅಗತ್ಯ ಸಾಲವನ್ನು ನೀಡಬೇಕು ಇಲ್ಲವಾದರೆ ಫಲಾನುಭವಿಗಳು ಉದ್ಯಮ ಸ್ಥಾಪನೆಗೆ ತೊಡಕಾಗುವ ಜೊತೆಗೆ ಆಸಕ್ತಿ ಕಳೆದುಕೊಳ್ಳುವ ಸಂಭವ ಹೆಚ್ಚು ಎಂದರು.
ಬ್ಯಾಂಕ್‌ಗಳು ಹಾಗೂ ಫಲಾನುಭವಿಗಳು ಒಟ್ಟಿಗೆ ಸೇರಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಈ ಸಭೆಯಲ್ಲಿ ತಮ್ಮ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ನಿರ್ದೇಶಕ ಮೋಹನ್‌ರಾವ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದರಾಜು,ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ರೇವತಿ ಇತರರು ಇದ್ದರು .