ದೇಶದ ಮೇಲಿನ ಅಭಿಮಾನ ಪ್ರದರ್ಶಿಸಿ

12. HBH.3.,
Published on

ಹಗರಿಬೊಮ್ಮನಹಳ್ಳಿ: ಪ್ರತಿಯೊಂದು ಮನೆ ಮೇಲೆ ತಿರಂಗಾ ಧ್ವಜ ಹಾರಾಡಬೇಕು. ಈ ಮೂಲಕ ದೇಶದ ಮೇಲಿನ ಅಭಿಮಾನ ಪ್ರದರ್ಶಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ಹೇಳಿದರು.

ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಬಿಜೆಪಿ ಯುವ ಹಾಗೂ ಮಂಡಲ ಘಟಕದಿಂದ ಆಯೋಜಿಸಿದ್ದ ಹರ್‌ಘರ್ ತಿರಂಗಾ ಅಭಿಯಾನದಲ್ಲಿ ಮಂಗಳವಾರ ಮಾತನಾಡಿದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ ಮಾತನಾಡಿ, ದೇಶಾದ್ಯಂತ ಹರ್‌ಘರ್ ತಿರಂಗಾ ಅಭಿಯಾನ ನಡೆದಿದ್ದು, ಬಿಜೆಪಿ ಸಕ್ರಿಯವಾಗಿ ಪಾಲ್ಗೊಂಡಿದೆ. ಆ.15ರ ಮೊದಲು ನಾಲ್ಕು ದಿನ ಪ್ರತಿ ಮನೆಯಲ್ಲಿ ಹರ್‌ಘರ್ ತಿರಂಗಾ ಅಭಿಯಾನದ ಸಂಭ್ರಮ ಕಂಡುಬರಬೇಕೆಂದು ಹೇಳಿದರು.

ಇದಕ್ಕೂ ಮೊದಲು ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು. ಮಂಡಲ ಅಧ್ಯಕ್ಷ ಕೆ.ಎಸ್.ಪ್ರಕಾಶ, ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂತಮ್ಮ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಲ್ಲಯ್ಯ, ಗ್ರಾಪಂ.ಸದಸ್ಯ ಇಟ್ಟಿಗಿ ಗುರುಬಸವರಾಜ, ಪ್ರಮುಖರಾದ ಬುಡ್ಡಿ ಬಸವರಾಜ, ದಿವಾಕರಗೌಡ, ಕೋಗಳಿ ಹನುಮಂತಪ್ಪ, ಅಶೋಕ ಗೂಳಿ, ಗುಂಡ್ರು ಕೃಷ್ಣಪ್ಪ, ಮರಿಯಪ್ಪ, ಕರಿಬಸಪ್ಪ, ನರೇಗಲ್ ಮಲ್ಲಿಕಾರ್ಜುನ, ಬದಾಮಿ ನಟರಾಜ, ಸಾಲ್ಮನಿ ನಾಗರಾಜ, ರಾಚಪ್ಪ, ಉಮೇಶ, ಪೂಜಪ್ಪ, ಹನುಮನಾಯ್ಕ, ಬಸವನಗೌಡ, ಕರಿಯಜ್ಜ, ಯುವರಾಜ, ಉಪ್ಪಾರ ವೆಂಕಟೇಶ, ದೊಡ್ಡಬಸಪ್ಪ , ಬ್ಯಾಟಿ ಸಂದೀಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net