

ವಿಜಯಪುರ: ಪಂ. ಜವಾಹರಲಾಲ ನೆಹರು ಅವರು ನವಭಾರತ ನಿರ್ಮಿಸಲು ಅಡಿಗಲ್ಲು ಹಾಕುವ ಜತೆಗೆ ದೇಶದ ಭದ್ರ ಬುನಾದಿಗಾಗಿ ಅಡಿಪಾಯ ಹಾಕಿದ ಸಾಕಾರ ಮೂರ್ತಿ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಪಂ. ಜವಾಹರಲಾಲ ನೆಹರುವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಜವಾಹರಲಾಲ ನೆಹರು ಅವರು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಲು ಶಿಕ್ಷಣದ ವ್ಯವಸ್ಥೆಗೆ ಬಲ ನೀಡಲು ಭಾರತದಲ್ಲಿ ಹಲವು ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಅಲ್ಲದೆ, ಹಲವು ಆಸ್ಪತ್ರೆಗಳನ್ನು ಕಟ್ಟಲು ಆೆ ಮಾಡಿದ ವೈದ್ಯಲೋಕದ ರಾಯಭಾರಿ, ಹಲವು ನದಿ, ಸೇತುವೆ ಕಟ್ಟಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ನೀರಾವರಿಯ ತಜ್ಷ. ವಿಜ್ಞಾನಿಗಳ ಸಾಧನೆ ಮನಗಂಡು ಇಸ್ರೋ ಬಾಹ್ಯಾಕಾಶ ಸಂಸ್ಥೆ ಸೃಷ್ಠಿಸಿದ ವಿಜ್ಞಾನಿಗಳ ಅಚ್ಚು ಮೆಚ್ಚಿನ ನಾಯಕ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಕೆ.ಎಫ್. ಅಂಕಲಗಿ, ಡಿ.ಎಲ್. ಚವಾಣ, ಗಂಗಾಧರ ಸಂಬಣ್ಣಿ, ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಂ. ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ದೇಸು ಚವಾಣ, ಜಮೀರಹ್ಮದ ಬ, ಆರತಿ ಶಾಹಪೂರ, ವಿದ್ಯಾಧರ ಪಾಟೀಲ, ಅಶ್ಪಾಕ ಮನಗೂಳಿ, ಮಹ್ಮದ ಮುಲ್ಲಾ, ಸಂತೋಷ ಬಾಲಗಾವಿ, ತಾಜುದ್ದೀನ ಖಲೀಫಾ, ಎಂ.ಬಿ. ನಾಯಿಕ, ಸರಫರಾಜ ಮಿರ್ಜಿ, ಶಬೀಹಾ ಮಂಟೂರ, ಮಹಿಬೂಬ ಕರ್ಜಗಿ, ದಿಲೀಪ ಪ್ರಭಾಕರ ಮತ್ತಿತರರಿದ್ದರು.