ದೇಶದ ಬೆಳವಣಿಗೆಗೆ ಯುವ ಶಕ್ತಿಯ ಪಾತ್ರ ಪ್ರಮುಖ

YUVAA
Published on


ಯಾದಗಿರಿ: ಯುವ ಜನಾಂಗಕ್ಕೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಯುವಜನೋತ್ಸವದಂಥ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿದ್ದು, ತಮ್ಮ ಕೌಶಲಗಳನ್ನು ಪ್ರದಶರ್ಿಸುವ ಮೂಲಕ ಜಿಲ್ಲೆಗೆ ಕೀತರ್ಿ ತರುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ. ಚವ್ಹಾಣ್ ಅವರು ಅಭಿಪ್ರಾಯಪಟ್ಟರು.

ಬುಧವಾರ ಇಲ್ಲಿನ ಸಕರ್ಾರಿ ಪದವಿ ಕಾಲೇಜಿನ ದಿ.ವಿಶ್ವನಾಥರಡ್ಡಿ ಮುದ್ನಾಳ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ 2022-23 ನೇ ಜಿಲ್ಲಾಮಟ್ಟದ ಯುವಜನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಸರ್ವತೋಮುಖ ಬೆಳವಣಿಗೆಗೂ ಯುವ ಶಕ್ತಿಯ ಪಾತ್ರ ಬಹಳ ಪ್ರಮುಖವಾಗಿದೆ. ದೇಶವನ್ನು ಉಳಿಸುವುದು ಅಂತೆಯೇ ಸದೃಢ ಭಾರತಕ್ಕಾಗಿ ಆರೋಗ್ಯವಂತ ಯುವಜನತೆಯು ನಿಮರ್ಾಣವಾಗಬೇಕಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಜಿಲ್ಲಾಕಾರಿ ಸ್ನೇಹಲ್, ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಹಿಂದುಳಿದ ವರ್ಗಗಳ ಕಲ್ಯಾಣಾಕಾರಿ ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net