ದೇಶದ ಪ್ರಥಮ ಪ್ರಜೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಮಾನ: ಆರ್.ಅಶೋಕ್ ಖಂಡನೆ

Published on

ಹಾಸನ : ದೇಶದ ಪ್ರಥಮ ಪ್ರಜೆಯಾಗಿರುವ ದಲಿತ ವರ್ಗಕ್ಕೆ ಸೇರಿದ ದೇಶದ ಪ್ರಥಮ ಪ್ರಜೆ ದ್ರೌಪತಿ ಮುರ್ಮು ಅವರ ಕುರಿತು ಏಕವಚನದಲ್ಲಿ ಮಾತನಾಡಿ ಅವಮಾನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರಪತಿಯೇ ಕಿತ್ತು ಬಿಸಾಕಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದರು.
ಸಿದ್ದರಾಮಯ್ಯ ತಮ್ಮ ಮಾತಿನ ವೇಗದಲ್ಲಿ ಆ ರೀತಿ ಹೇಳಿಬಿಟ್ಟೆ ಎಂದು ಸಮಜಾಯಿಷಿ ನೀಡುತ್ತಾರೆ. ಅದೇ ರೀತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಲಿ ನೋಡೋಣ. ಹಾಗೇನಾದರೂ ಮಾತನಾಡಿದರೆ ಮೂರು ದಿನದಲ್ಲಿ ಸ್ಥಾನದಿಂದ ಕಿತ್ತು ಬಿಸಾಕುತ್ತಾರೆ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ಕದಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಹಲವು ವರ್ಷಗಳಿಂದ ಆ ಗ್ರಾಮದಲ್ಲಿ ಹನುಮ ಧ್ವಜ ಹಾರಾಡುತ್ತಿದೆ. ಆದರೆ ರಾತ್ರೋರಾತ್ರಿ ಹೋಗಿ ರಾಷ್ಟ್ರಧ್ವಜ ಹಾರಿಸಿದ್ದು ಸರಿಯಲ್ಲ. ಊರವರೆಲ್ಲ ಚಂದಾ ಎತ್ತಿ 6 ಲಕ್ಷ ರೂ. ಕೂಡಿಸಿ ಧ್ವಜಕಂಬ ನೆಟ್ಟಿದ್ದರು. ಅದರ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗು ಸ್ಥಳೀಯ ಶಾಸಕರನ್ನು ಕರೆದಿದ್ದರು. ಆದರೆ ಆ ಸಮಾರಂಭಕ್ಕೆ ಇಬ್ಬರೂ ಹೋಗಿರಲಿಲ್ಲ. ಆದರೆ ಏಕಾಏಕಿ ರಾಷ್ಟ್ರಧ್ವಜ ಹಾರಿಸಬಾರದಿತ್ತು. ರಾಷ್ಟ್ರ ಧ್ವಜಕ್ಕೆ ತನ್ನದೇಯಾದ ಗೌರವವಿದೆ. ಎಲ್ಲಿ ಬೇಕೆಂದರಲ್ಲಿ ಯಾವಾಗ ಬೇಕಾದರೂ ರಾಷ್ಟ್ರಧ್ವಜ ಹಾರಿಸಿದ್ದು ತಪ್ಪು. ಅದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ರಾಜ್ಯ ಸರ್ಕಾರದ ಕೀಳು ಮಟ್ಟದ ರಾಜಕಾರಣಕ್ಕೆ ಬೇಸತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಫೆ. 7ಕ್ಕೆ ಮಂಡ್ಯ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಇದಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು.
ರಾಷ್ಟ್ರ ಧ್ವಜ ಹಾಗು ಭಗವಾಧ್ವಜವನ್ನು ಎಲ್ಲೆಲ್ಲಿ ಹಾರಿಸಬೇಕೆಂಬುದನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಕಲಿಯುವ ಅವಶ್ಯಕತೆ ನಮಗಿಲ್ಲ. ನಮಗೆ ಪಾಠ ಮಾಡುವ ನೈತಿಕತೆ ಅವರಿಗೆ ಇಲ್ಲ ಎಂದು ತಿರುಗೇಟು ನೀಡಿದರು.
ಗಂಡಂದಿರ ಹಣ ಪಡೆದು ಹೆಂಡತಿಯರಿಗೆ ಗ್ಯಾರಂಟಿ ಹೆಸರಿನಲ್ಲಿ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಬೆಲ್ ಪಾರಿತೋಷಕ ನೀಡಬೇಕು. ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತಿದ್ದಾರೆ. ಅದಕ್ಕಾಗಿ ಪುರುಷರಿಂದ 3 ಸಾವಿರ ರೂ. ಕಟ್ಟಿಸಿಕೊಳ್ಳುತ್ತಿದ್ದಾರೆ. ಉಳಿದ ಒಂದು ಸಾವಿರ ರೂ. ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ. ಹಾಲು, ಮದ್ಯ ಹಾಗು ವಿದ್ಯುತ್ ದರ ಹೆಚ್ಚಿಸಿ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಟು ತಿಂಗಳ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ವಿವಿಧ ಮೂಲಗಳಿಂದ ಸರ್ಕಾರಕ್ಕೆ ಬರಬೇಕಿದ್ದ 25 ಸಾವಿರ ಕೋಟಿ ರೂ. ಇದುವರೆಗೆ ಬಂದಿಲ್ಲ. ಇಂತಹ ದುಸ್ಥಿತಿಗೆ ಕರ್ನಾಟಕದ ಸರ್ಕಾರ ಯಾವತ್ತೂ ಬಂದಿರಲಿಲ್ಲ. ಇದಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಚುನಾವಣೆ ಬಳಿಕ ಯಾವ ಗ್ಯಾರಂಟಿಗಳು ಇರುವುದಿಲ್ಲ. ಮಾಗಡಿ ಶಾಸಕ ಬಾಲಕೃಷ್ಣ ಅವರು ಗ್ಯಾರಂಟಿ ನಿಲ್ಲಿಸುವುದಾಗಿ ಹೇಳಿರುವುದರಲ್ಲಿ ಯಾವ ತಪ್ಪಿಲ್ಲ. ಸತ್ಯವನ್ನೇ ಅವರು ನುಡಿದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು,ನಗರಸಭೆಯ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಶೋಬನ್‌ಬಾಬು, ಕಿರಣ್ ಇತರರಿದ್ದರು.

ಹಾಸನದಿಂದಲೇ ಹೋರಾಟ ಪ್ರಾರಂಭ :
ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಕಾಫಿ ಬೆಳೆದು ಸರ್ಕಾರಕ್ಕೆ ಆದಾಯ ನೀಡುತ್ತಿರುವ ಬೆಳೆಗಾರರ ಹಿತ ಕಾಯಲು ನಮ್ಮ ಸರ್ಕಾರ ಜಾರಿಗೆ ತಂದಿದ್ದ ಯೋಜನೆಯನ್ನು ಪ್ರಸ್ತುತ ಸರ್ಕಾರ ತಡೆ ಹಿಡಿದಿದ್ದು, ಸರ್ಕಾರದ ನಡೆ ಖಂಡಿಸಿ ಹಾಸನದಲ್ಲಿ ಹೋರಾಟ ನಡೆಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದರು.
ದೇಶದ ಆದಾಯ ವೃದ್ಧಿಯಲ್ಲಿ ಕಾಫಿ ಬೆಳೆಗಾರರ ಕೊಡುಗೆ ಅಪಾರವಾಗಿದೆ. ಆದರೆ ಕಾಫಿ ಬೆಳೆಗಾರರ ವಶದಲ್ಲಿರುವ ಸರ್ಕಾರಿ ಭೂಮಿಯನ್ನು ಇಂದಿಗೂ ಸಕ್ರಮ ಮಾಡಿಕೊಡಲು ಆಗಿಲ್ಲ. ಇಂತಹ ಭೂಮಿಯನ್ನು ಒತ್ತುವರಿದಾರರಿಗೆ 10-30 ವರ್ಷಗಳ ವರೆಗೆ ಗುತ್ತಿಗೆ ನೀಡುವ ಯೋಜನೆಗೆ ಅಂದಿನ ನಮ್ಮ ಸರ್ಕಾರ ನಿರ್ಧರಿಸಿತ್ತು. ವಿಧಾನಸಭೆ ಹಾಗು ಪರಿಷತ್‌ನಲ್ಲಿ ಅಂಗೀಕಾರ ಸಹ ದೊರೆತಿತ್ತು. ಈಗ ಜಿಲ್ಲಾಧಿಕಾರಿ ಅವರು ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಆದರೆ ಇದರ ಶ್ರೇಯಸ್ಸು ಬಿಜೆಪಿಗೆ ಸೇರುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ತಡೆಯೊಡ್ಡಿದೆ. ಈ ಕುರಿತು ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರೊಂದಿಗೆ ಚರ್ಚೆ ನಡೆಸಲಾಗಿದ್ದು, ಫೆ. 10ರ ಒಳಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಹಾಸನದಿಂದಲೇ ಹೋರಾಟ ಪ್ರಾರಂಭವಾಗಲಿದ್ದು, ನಾನೂ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.

ಬಾಯಲ್ಲಿ ರಾಮ, ಮನಸಲ್ಲಿ ಟಿಪ್ಪು :
ಭಾರತ ಯಾವತ್ತೂ ಯಾರ ಮೇಲೂ ದಾಳಿ ನಡೆಸಿಲ್ಲ. ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿ ಕಟ್ಟಿದ್ದಾರೆ. ಆ ಕಾರಣಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಜ್ಞಾನವ್ಯಾಪತಿಯಲ್ಲೂ ದೇವಾಲಯ ತಲೆ ಎತ್ತುತ್ತದೆ. ಅದು ಬಿಜೆಪಿ ಸರ್ಕಾರದಲ್ಲೇ ಆಗಬೇಕು ಎನ್ನುವುದು ನಮ್ಮ ಅಪೇಕ್ಷೆ. ಕಾಂಗ್ರೆಸ್‌ಗೆ ಬಾಯಲ್ಲಿ ರಾಮ, ಮನಸಲ್ಲಿ ಟಿಪ್ಪು ಸುಲ್ತಾನ್ ಇದ್ದಾನೆ. ಆದ್ದರಿಂದ ಬಿಜೆಪಿ ಆಡಳಿತಾವಧಿಯಲ್ಲೇ ಹಿಂದೂ ದೇವಾಲಯಗಳು ಅಭಿವೃದ್ಧಿ ಹೊಂದಬೇಕು. ಶ್ರೀರಂಗಪಟ್ಟಣದ ಮಸೀದಿಯ ಕಂಬಗಳಲ್ಲಿ ನಾಗರ ಚಿತ್ರಗಳಿವೆ. ನಾಗರಕ್ಕೂ ಮತ್ತು ಸಾಬರಿಗೂ ಏನು ಸಂಬಂಧ. ಎಲ್ಲಾ ಧರ್ಮದವರು ಸೌಹಾರ್ದಯುತವಾಗಿ ಬದುಕಬೇಕೆಂಬುದು ನಮ್ಮ ಅಭಿಲಾಷೆ. ಆದ್ದರಿಂದಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ್ದೇವೆ ಎಂದು ಹೇಳಿದರು.

ಅಭ್ಯರ್ಥಿ ಘೋಷಣೆ ಮಾಡಿಲ್ಲ:
ಲೋಕಸಭೆ ಚುನಾವಣೆ ದಿನಗಣನೆ ಶುರುವಾಗಿದ್ದು ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್ ಹಾಗು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿವೆ. ಹಾಸನ ಸೇರಿದಂತೆ ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ತಿಂಗಳಾಂತ್ಯಕ್ಕೆ ಅಭ್ಯರ್ಥಿಗಳ ಘೋಷಿಸಬೇಕೆಂದು ನಾನು ವರಿಷ್ಠರಿಗೆ ಒತ್ತಾಯಿಸಿದ್ದೇನೆ. ಹಾಸನದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾರೆಂಬ ವಿಚಾರ ನನಗೆ ಗೊತ್ತಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಏನೇ ಹೇಳಿದ್ದರೂ ಅದು ವರಿಷ್ಠರ ಹಂತದಲ್ಲಿ ಚರ್ಚೆಯಾಗಿರುತ್ತದೆ. ಎಲ್ಲಾ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಈಗಿನಿಂದಲೇ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ವರಿಷ್ಠರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net