ದೇಶದ ಪ್ರಗತಿಗೆ ಸಮರ್ಪಿಸಿಕೊಳ್ಳಬೇಕು

Avvaji
Published on

ಕಲಬುರಗಿ: ದೇಶದ ಉನ್ನತಿಯ ಕಡೆ ನಮ್ಮ ನಡೆಯಿರಲಿ. ದೇಶದ ಉಜ್ವಲ ಭವಿಷ್ಯ ಸೃಷ್ಟಿಸೋಣ. ನಾವೆಲ್ಲರೂ ಭಾರತಿಯರು ಎಂಬ ಭಾವನೆ ನಮ್ಮದಾಗಲಿ ಹಾಗೂ ದೇಶದ ಪ್ರಗತಿಗೆ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಕರೆ ನೀಡಿದರು.

ಶರಣಬಸವ ವಿಶ್ವವಿದ್ಯಾಲಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರೊÈÃತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರÈ ದೊರೆತು ಇಂದಿಗೆ 76 ವರ್ಷ ಪೂರ್ಣಗೊಂಡು 77ನೇ ವರ್ಷಕ್ಕೆ ಪದಾರ್ಪಣೆ ಮಾಡಿz್ದೆÃವೆ. ಈ ವರ್ಷದ ಘೋಷವಾಕ್ಯ ರಾಷ್ಟç ಮೊದಲು, ಯಾವಾಗಲೂ ಮೊದಲು ಎಂದು ಆಚರಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬರಲ್ಲಿ ಏಕತೆಯ ಜಾಗೃತಿ, ವಿವಿಧತೆಯಲ್ಲಿ ಏಕತೆ ಕಾಣಸಿಗಬೇಕು. ಪ್ರತಿ ಮನ-ಮನೆಯಲ್ಲಿ ರಾಷ್ಟç ಭಕ್ತಿಯ ಜ್ಯೋತಿ ಬೆಳಗಲಿ. ಎಲ್ಲರೂ ಸ್ವಾತಂತ್ರÈ ಹೋರಾಟಗಾರರ ಜೀವನ ಚರಿತ್ರೆ ಓದಿ ತಿಳಿದುಕೊಳ್ಳಬೇಕು. ಜೀವನದುದ್ದಕ್ಕೂ ಯಾವುದೇ ಕಷ್ಟ-ಸಂಘರ್ಷ ಎದುರಾದರೂ ಎದೆಗುಂದದೆ ಎಲ್ಲವನ್ನೂ ಮೆಟ್ಟಿ ನಿಲ್ಲಬೇಕು ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವೇಶ್ವರ ಸಂಸ್ಥಾನ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ವಿದ್ಯಾಭ್ಯಾಸದ ಜತೆಗೆ ದೇಶಭಕ್ತಿಯ ಸಂಸ್ಕೃತಿ ಹಾಗೂ ಶರಣ ತತ್ವ ಕಲಿಸಿ ಒಳ್ಳೆಯ ಪ್ರಜೆಗಳಾಗಿ ವಿದ್ಯಾರ್ಥಿಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾನದ 8ನೇ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರ ಮಕ್ಕಳಾದ ಶಿವಾನಿ ಅಪ್ಪ, ಭವಾನಿ ಅಪ್ಪ ಹಾಗೂ ಮಹೇಶ್ವರಿ ಅಪ್ಪ ದೇಶಭಕ್ತಿ ಗೀತೆ ಹಾಡಿದ್ದು ವಿಶೇಷವಾಗಿತ್ತು. ಎನ್‌ಸಿಸಿ, ಎನ್‌ಎಸ್‌ಎಸ್, ಶರಣಬಸವ ವಿವಿ, ಶರಣಬಸವೇಶ್ವರ ರೆಸಿಡೆನ್ಸಿಯಲ್ ಶಾಲೆ ಇತರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಗೌರವ ವಂದನೆ ಸ್ವೀಕರಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಸಮಕುಲಪತಿ ಪ್ರೊ.ವಿ.ಡಿ. ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಡೀನ್ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಪ್ರೊ.ಕಿರಣ ಮಾಕಾ ಇತರರಿದ್ದರು. ಇದಕ್ಕೂ ಮುನ್ನ ಕುಲಪತಿ ಡಾ.ನಿರಂಜನ್ ನಿಷ್ಠಿ ಧ್ವಜಾರೋಹಣ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net