

ಸೇಡಂ: ದೇಶದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಹಾಗಾಗಿ ಸಮಾಜದಲ್ಲಿ ಶಿಕ್ಷಕರ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ನುಡಿದರು.
ಆಡಕಿ ಗ್ರಾಮದಲ್ಲಿ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೋಣೆಗಳ ಲೋಕಾರ್ಪಣೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಕೋವಿಡ್‌ನಂಥ ವಿಷಮ ಪರಿಸ್ಥಿತಿಯಲ್ಲಿಯೂ ಶಿಕ್ಷಕರು ಅತ್ಯಮೂಲ್ಯ ಸೇವೆ ನೀಡಿದ್ದು ಹೆಮ್ಮೆಯ ವಿಷಯ ಎಂದರು.
ಗ್ರಾಪಂ ಅಧ್ಯಕ್ಷ ಮಹಾದೇವಪ್ಪ ಡಬ್ಬು, ಮುಖ್ಯಗುರು ರಾಘವೇಂದ್ರ, ರೂಪಾದೇವಿ ಹಿರೇಮಠ, ವಿಜಯಕೃಷ್ಣ ಮುಧೋಳ, ಸಂಸ್ಥೆಯ ಅಧ್ಯಕ್ಷ ಸಂಗಪ್ಪ ಗಾಣಿಗೇರ, ಶರಣಪ್ಪ ಮನ್ನೆ, ವೆಂಕಟಪ್ಪ ನೀರೆಟಿ, ಸಾಯಿರೆಡ್ಡಿ ಮನ್ನೆ, ಹುಸೇನಿ ಬಳಗಾರ, ಬಸವರಾಜ ಮಾಸನಪಲ್ಲಿ, ಸುರೇಶ ಕಲಾಲ್, ಶ್ರೀನಿಕೇತನ, ಭೀಮಯ್ಯಗೌಡ, ನಾಗರಾಜ ಜೋಶಿ, ಶರಣಯ್ಯಗೌಡ, ಶಂಕರ ಕೊತ್ತಾಪಲ್ಲಿ, ಜನಾರ್ಧನ ಬೆಜ್ಜ, ನರಸಪ್ಪ ಕೊತ್ತಾಪಲ್ಲಿ, ನರಸಿಂಹಲು ನಿಡಗುಂದಾ, ಭೀಮಪ್ಪ, ಶಾಂತಾಬಾಯಿ, ಸುನೀತಾ, ಗಂಗಮ್ಮ, ನಿಂಗಮ್ಮ ಇತರರಿದ್ದರು.