

ಹರಪನಹಳ್ಳಿ: ರೈತರು, ಕಾರ್ಮಿಕರು, ದೀನದಲಿತರು, ಮಹಿಳೆಯರ ವಿಕಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ ಹೇಳಿದರು.
ಪ್ರಧಾನಿ ಮೋದಿ ಸರ್ಕಾರಕ್ಕೆ 11 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಟ್ಟಣದ ತೆಲುಗರ ಓಣಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ‘ವಿಕಸಿತ ಭಾರತ ಸಂಕಲ್ಪ ಸಿದ್ಧಿ’ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಕಳೆದ 11 ವರ್ಷದಲ್ಲಿ ಭಾರತ ವಿಶ್ವಮಟ್ಟದಲ್ಲಿ ಆರ್ಥಿಕವಾಗಿ ನಾಲ್ಕನೇ ಸ್ಥಾನಕ್ಕೇರಲು ಪ್ರಧಾನಿ ಮೋದಿ ಕಾರಣವಾಗಿದ್ದು, ಅವರ ಆಡಳಿತದ ಪ್ರತಿಯೊಂದು ಯೋಜನೆ ದೇಶದ ಪ್ರಗತಿಗೆ ಮುನ್ನುಡಿ ಬರೆದಿವೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಕುರಿತು ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನರಿಗೆ ಮನವರಿಕೆ ಮಾಡಬೇಕೆಂದು ಕರೆ ನೀಡಿದರು.
ಪ್ರಮುಖರಾದ ಎಸ್.ಪಿ.ಲಿಂಬ್ಯಾನಾಯ್ಕಾ, ಸೂರ್ಯ ಪಾಪಣ್ಣ, ಓಂಕಾರ್‌ಗೌಡ, ಕುಸುಮಾ ಜಗದೀಶ್, ಸಂಗಮೇಶ ಕಡೆಮನಿ, ಮಹೇಶ್ ಜವಳಿ, ಸ್ವಪ್ನಾ ಮಲ್ಲಿಕಾರ್ಜುನ, ಮಂಜುಳಾ, ಜಯಕ್ಕ ಬಸವರಾಜ್, ಮಟ್ಟಿ ಮಲ್ಲಿಕಾರ್ಜುನ, ಹನುಮಂತ ಮತ್ತಿತರರಿದ್ದರು.