ದೇಶದ ಪ್ರಗತಿ ಬಯಸುವವರಿಗೆ ಅಚ್ಛೇದಿನ್

bkt-11-5
ಬಾಗಲಕೋಟೆ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿದರು. ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಮಾಧ್ಯಮ ವಕ್ತಾರ ಶಿವಾನಂದ ಸುರಪುರ, ನಗರಸಭೆ ಸದಸ್ಯ ಬಸವರಾಜ ಅವರಾದಿ, ಈಶ್ವರಪ್ಪ ಆದಿಪ್ಪನವರ, ಮುತ್ತಣ್ಣ ಬೆಣ್ಣೂರ ಇದ್ದರು.
Published on

ಬಾಗಲಕೋಟೆ: ದೇಶದ ಅಭಿವೃದ್ದಿ ಪರ ನಿಂತವರಿಗೆ, ಪ್ರಗತಿ ಬಯಸುವವರಿಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಅಚ್ಚೇದಿನ್ ಬಂದಿದೆ. ದೇಶದ ವಿರೋಽಗಳಿಗೆ, ಉಗ್ರಗಾಮಿಗಳ ಪರ ನಿಲ್ಲುವವರು, ಪೊಲೀಸರನ್ನು ಬಲಿ ಪಶು ಮಾಡುವವರಿಗೆ, ಮುಡಾ ಸೈಟ್ ನುಂಗುವAತವರಿಗೆ ಅಚ್ಚೇದಿನ್ ಬಂದಿಲ್ಲ ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ೧೧ ವರ್ಷದ ಆಡಳಿತದ ಅವಽಯಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ್ದು ದಾಖಲೆಯಾಗಿದೆ. ದೇಶವನ್ನು ಅಭಿವೃದ್ಧಿಯತ್ತ ಒಯ್ಯುವ ಜತೆಗೆ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡುವ ಮೂಲಕ ಜಗತ್ತಿಗೆ ಮಾರ್ಗದರ್ಶನ ಮಾಡುವಂತಹ ಶಕ್ತಿ ಭಾರತಕ್ಕೆ ಬಂದಿದೆ ಎಂದರು.

ದೇಶದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಯಾವುದೇ ಮಂತ್ರಿಗಳು ಕಪ್ಪು ಚುಕ್ಕೆ ಇಲ್ಲದೇ, ಭ್ರಷ್ಟಾಚಾರದಲ್ಲಿ ಮುಳಗದೇ ಸ್ವಚ್ಛ ಆಡಳಿತವನ್ನು ಕೊಡುತ್ತಿದ್ದಾರೆ. ಜಮ್ಮು ಕಾಶ್ಮೀರ ಭಾರತದ ಒಂದು ಭಾಗವೆಂದು ಮಾಡುವ ಮೂಲಕ ೩೭೦ ಕಲಂ ರದ್ದು ಮಾಡಿರುವುದು, ಭಯೋತ್ಪಾದಕರು ಭಾರತದ ಮೇಲೆ ದಾಳಿ ಮಾಡಿದಾಗ ಅವರಿಗೆ ಉತ್ತರ ಕೊಟ್ಟಿರುವುದು ಹೀಗೆ ಹಲವಾರು ಕೆಲಸಗಳನ್ನು ಮೋದಿಯವರು ಮಾಡಿದ್ದಾರೆ. ಮುಂದೆ ಒಂದು ದೇಶ ಒಂದು ಕಾಯ್ದೆ ಕೂಡ ಜಾರಿಗೆ ತರಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಬಾಗಲಕೋಟೆ ಜಿಲ್ಲೆಗೆ ನರೇಗಾದಡಿ ಪ್ರಧಾನಿಯವರು ನೀಡಿದ ಯೋಜನೆಯನ್ನು ಶೇ.೮೦ರಷ್ಟು ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ೨೫ ಕಿ.ಮೀ. ಚತುಷ್ಪಥ ಹೆದ್ದಾರಿ, ೨೪ ಕಿ.ಮೀ. ದ್ವಿಪಥ ಹೆದ್ದಾರಿ ನಿರ್ಮಾಣವಾಗಿದೆ. ಅಮೃತ ಯೋಜನೆಯಡಿ ಬಾಗಲಕೋಟೆ ರೈಲ್ವೆ ನಿಲ್ದಾಣ ಪುನರ್ ನವೀಕರಣ, ಗುಳೇದಗುಡ್ಡ, ಬಾದಾಮಿ ರೈಲ್ವೆ ನಿಲ್ದಾಣ ಸಮೀಪ ಮೇಲ್ಸುತುವೆ ನಿರ್ಮಾಣ, ಪ್ರಧಾನಮಂತ್ರಿ ಸಡಕ್ ಯೋಜನೆಯಡಿ ೨೦೮ ಕಿ.ಮೀ ರಸ್ತೆ ನಿರ್ಮಾಣ, ಜಿಲ್ಲೆಯಲ್ಲಿ ೧,೯೬,೮೬೯ ಎಲ್‌ಪಿಜಿ ಗ್ಯಾಸ್ ಸಂಪರ್ಕ, ೮೦೩೪೪ ಮುದ್ರಾ ಖಾತೆಗಳನ್ನು ಮಾಡಲಾಗಿದ್ದು,

ಇದರಡಿ ೯೨೨.೪೭ ಕೋಟಿ ರೂ. ನೀಡಲಾಗಿದೆ. ೮೩೧೨೪ ಸುಖನ್ಯಾ ಖಾತೆಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಸವದತ್ತಿಯ ರೇಣುಕಾ ಯಲ್ಲಮ್ಮ ದೇವಾಲಯಕ್ಕೆ ೧೧೧ ಕೋಟಿ ರೂ., ಚಾಮುಂಡೇಶ್ವರಿ ದೇವಾಲಯಕ್ಕೆ ೪೯.೫ ಕೋಟಿ ರೂ.ಅನುದಾನ ಲಭಿಸಿದ್ದು ಒಟ್ಟು ೧೬೦.೫ ಕೋಟಿ ಹಣವು ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ರಾಜ್ಯಕ್ಕೆ ಲಭಿಸಿದ್ದು ಹೀಗೆ ಹಲವಾರು ಕೊಡುಗೆಯನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿದೆ ಎಂದು ತಿಳಿಸಿದರು.

ಭಾರತ ಆರ್ಥಿಕ ಅಭಿವೃದ್ಧಿಯಲ್ಲಿ ವಿಶ್ವಮಟ್ಟದಲ್ಲಿ ೪ನೇ ಸ್ಥಾನಕ್ಕೆ ಬಂದಿದೆ. ಬಡತನ ರೇಖೆ ೭.೫೦ರಷ್ಟು ಕಡಿಮೆಯಾಗಿದೆ. ೨೩ ಕೋಟಿ ಜನ ಬಡತನದಿಂದ ಹೊರ ಬಂದಿರುವುದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅಚ್ಛೆದಿನ್ ಕಾಣಿಸುತ್ತಿಲ್ಲವಾ ಎಂದರು.

ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಮಾಧ್ಯಮ ವಕ್ತಾರ ಶಿವಾನಂದ ಸುರಪುರ, ನಗರಸಭೆ ಸದಸ್ಯ ಬಸವರಾಜ ಅವರಾದಿ, ಈಶ್ವರಪ್ಪ ಆದಿಪ್ಪನವರ, ಮುತ್ತಣ್ಣ ಬೆಣ್ಣೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net