ದೇಶದ ಒಳಿತಿಗೆ ಬಾಬು ಜಗಜೀವನರಾಂ ಶ್ರಮ

PNP 01
Published on

ಪಾಂಡವಪುರ: ಡಾ.ಬಿ.ಆರ್.ಅಂಬೇಡ್ಕರ್ ನಂತರ ಬಾಬು ಜಗಜೀವನರಾಮ್ ಅವರು ದೇಶದ ಒಳಿತಿಗಾಗಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ನಡೆದ ಬಂದ ದಾರಿಯಲ್ಲಿ ಸಾಗುವ ಮೂಲಕ ಅವರ ತತ್ವ ಸಿದ್ಧಾಂತ ಅನುಸರಿಸಬೇಕು ಎಂದು ತಾಪಂ ಇಒ ಲೋಕೇಶ್ ಮೂರ್ತಿ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ನಡೆದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬು ಜಗಜೀವನರಾಮ್ ಅವರ ಜೀವನವನ್ನು ಅಧ್ಯಯನ ಮಾಡಿ ಅವರ ವಿಚಾರಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದರು.

ಕೇವಲ ದಲಿತ ಸಮುದಾಯಕ್ಕೆ ಸೀಮಿತವಾಗಿ ಬಾಬು ಜಗಜೀವನರಾಮ್ ಕೆಲಸ ಮಾಡಿಲ್ಲ. ಎಲ್ಲ ಸಮುದಾಯಕ್ಕೂ ಸ್ಪಂದನೆ ಮಾಡಿ ಕೆಲಸ ಮಾಡಿದ್ದಾರೆ ಎಂದರು.
ಪಾಂಡವಪುರ ಉಪವಿಭಾಗಾಧಿಕಾರಿ ನೊಂಗ್ಜಾಯ್ ಮಹಮ್ಮದ್ ಅಕ್ರಂ ಅಲಿ ಪಾಷ ಮಾತನಾಡಿದರು.

ತಹಸೀಲ್ದಾರ್ ಕೆ.ಸಿ.ಸೌಮ್ಯಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲೇಶ್, ಸಿಬ್ಬಂದಿ ಟಿ.ಲೋಕೇಶ್, ಕೋಮಲಾ, ರಾಜಪ್ಪ, ದಲಿತ ಮುಖಂಡರಾದ ಡಿ.ಕೆ.ಅಂಕಯ್ಯ, ಕೆನ್ನಾಳು ಚಿಕ್ಕಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net