

ಬಸವಕಲ್ಯಾಣ: ದೇಶದ ಉನ್ನತಿಗೆ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ನೀಡಿದ ಕೊಡುಗೆ ದೊಡ್ದದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾದ್ಯಕ್ಷ ರಮೇಶ ಉಮ್ಮಾಪುರೆ ಹೇಳಿದರು.
ತಾಲೂಕು ಆಡಳಿತ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬಾಬೂಜಿ ಅವರ ಜೀವನ ಚರಿತ್ರೆ ಹೋರಾಟಮಯವಾಗಿದ್ದು, ಅವರ ಆದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಮಾತನಾಡಿ, ಕೇಂದ್ರ ಕೃಷಿ ಸಚಿವರಾಗಿ ಕೃಷಿಯಲ್ಲಿ ಕ್ರಾಂತಿ ಮಾಡಿದ ಬಾಬು ಜಗಜೀವನರಾಮ್ ಅವರು ದೇಶದ ಆಹಾರ ಸ್ವಾವಲಂಭನೆ ಸಾದಿಸುವಲ್ಲಿ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಮಹಾತ್ಮರು, ಮಹಾಪುರುಷರು, ರಾಷ್ಟ್ರ ನಾಯಕರು ನೀಡಿದ ತತ್ವಾದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದೇ ಜಯಂತಿ ಆಚರಣೆಯ ಹಿಂದಿರುವ ಆಶಯವಾಗಿದೆ ಎಂದರು.
ತಾಪಂ ಇಒ ರಮೇಶ ಸುಲ್ಫಿ, ನಗರಸಭೆಯ ಪೌರಾಯುಕ್ತ ರಾಜು ಬಣಕಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಕ ದಿಲೀಪಕುಮಾರ ಉತ್ತಮ, ಸಿಪಿಐ ಅಲಿಸಾಬ್, ಸರ್ಕಾರಿ ಆಸ್ಪತ್ರೆ ಸಿಎಂಒ ಡಾ.ಅಪರ್ಣ, ಮುಡಬಿ ಪಿಎಸ್‌ಐ ಜಯಶ್ರೀ ಹೊಡೆಲ್, ಶಿರಸ್ತೇದಾರ್ ಅನೀಕುಮಾರ ಚಾಂದೆ ಇತರರಿದ್ದರು. ಪಶು ಸಂಗೋಪನಾ ಇಲಾಖೆ ಎಡಿ ಡಾ.ರವೀಂದ್ರ ನಿರೂಪಣೆ ಮಾಡಿದರು.
ಭವ್ಯ ಮೆರವಣಿಗೆ: ನಗರದ ಕೋಟೆಯಿಂದ ಮುಖ್ಯರಸ್ತೆ ಮಾರ್ಗವಾಗಿ ಡಾ.ಅಂಬೇಡ್ಕರ್ ವೃತ್ತದ ಮೂಲಕ ಬಿಕೆಡಿಬಿ ಕಲ್ಯಾಣ ಮಂಟಪದವರೆಗೆ ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರದ ಭವ್ಯ ಮರವಣಿಗೆ ಜರುಗಿತು. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಮಾಜಿ ಎಂಎಲ್ಸಿ ವಿಜಯಸಿಂಗ್, ನಗರಸಭೆ ಅಧ್ಯಕ್ಷ ಎಂಡಿ.ಸಗೀರೋದ್ದಿನ್, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಪ್ರಮುಖರಾದ ಅರ್ಜುನ ಕನಕ, ಯುವರಜ ಭೆಂಡೆ, ಆಶೋಕ ಢಗಳೆ, ರಾಜು ಮುಜನಾಯಕ, ಅನಿಕೇತ ಹೊಸಮನಿ, ಡಿಕೆ ದಾವುದ್, ಗಿರೀಶ ತಾಂಬೋಳೆ, ಓಂಪ್ರಕಾಶ ಪಾಟೀಲ್ ಇತರರಿದ್ದರು.