ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಾತ್ರ ಅಪಾರ

28Manju10
ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಪಕ್ಷದ 139ನೇ ಸಂಸ್ಥಾಪನಾ ದಿನ ಆಚರಿಸಲಾಯಿತು. ಅಧ್ಯಕ್ಷ ವಿನಯ ನಾವಲಗಟ್ಟಿ, ಬಸವರಾಜ ಶೇಂಗಾವಿ, ಮೋಹನ ರೆಡ್ಡಿ, ಪ್ರದೀಪ ಎಂ.ಜೆ., ಶಕೀಲಾ ಮುಲ್ಲಾ ಇತರರು ಇದ್ದಾರೆ.
Published on

ಬೆಳಗಾವಿ: ಇತಿಹಾಸ ಕಂಡ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್ ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರಾಗಿರುವುದು ಪುಣ್ಯ ಎಂದು ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ 139ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಂವಿಧಾನದ ಅಡಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿ, ಎಲ್ಲ ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸುತ್ತ ಬಲಿಷ್ಠ ರಾಷ್ಟ್ರಕಟ್ಟಿರುವ ಕಾಂಗ್ರೆಸ್‌ದೊಡ್ಡ ಇತಿಹಾಸ ಪರಂಪರೆ ಹೊಂದಿದೆ. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಪಕ್ಷ, ಪಕ್ಷದ ನಾಯಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಹಾಗಾಗಿ ಈಗಿನಿಂದಲೇ ಪಕ್ಷ
ಸಂಘಟನೆ ಜತೆಗೆ ಚುನಾವಣೆ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಸಂಕಲ್ಪ ಮಾಡೋಣ ಎಂದರು.

ಬಸವರಾಜ ಶೇಂಗಾವಿ, ಮೋಹನ ರೆಡ್ಡಿ, ಪ್ರದೀಪ ಎಂ.ಜೆ., ಶೇಖರ ಐ.ಟಿ., ಶಕೀಲಾ ಮುಲ್ಲಾ, ವಿನೋದ ಸೊಲ್ಲಾಪುರೆ, ರಾಜು ಶಿಂಘೆ, ಅನ್ನಪೂರ್ಣ ಅಸೂರಕರ, ಆಯಿಶಾ ಸನದಿ, ಜಯಶ್ರೀ ಮಾಳಗಿ, ವಿಜಯ ಗೆಜ್ಜಿ, ಗಿರೀಶ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net