ದೇಶದ ಅಭಿವೃದ್ಧಿಗೆ ಮುಂದಾಗಿ

IMG_20230816_145039
ನುಗ್ಗೇಹಳ್ಳಿ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಆಯೋಜಿಸಿದ್ದ 77ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಉಪಾಧ್ಯಕ್ಷ ಎನ್.ಎಸ್.ಲಕ್ಷ್ಮಣ್ ಮಾತನಾಡಿದರು. ಅಭಿಲಾಶ್, ಮಂಜುನಾಥ್, ರಂಗಸ್ವಾಮಿ ಇತರರು ಇದ್ದರು.
Published on

ನುಗ್ಗೇಹಳ್ಳಿ: ಕಾನೂನುಗಳಿಗೆ ಗೌರವ ಕೊಟ್ಟು ಬೇರೆಯವರಿಗೆ ತೊಂದರೆಯಾಗದಂತೆ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಉಪಾಧ್ಯಕ್ಷ ಎನ್.ಎಸ್.ಲಕ್ಷ್ಮಣ್ ತಿಳಿಸಿದರು.


ನುಗ್ಗೇಹಳ್ಳಿ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ, ಭಾಷೆ, ಜಲ, ನೆಲ, ಸಂಸ್ಕೃತಿ ಉಳಿಸಿ ಬೆಳೆಸಬೇಕು. ಸ್ವಾಮಿ ವಿವೇಕಾನಂದರು ಏಳಿರಿ ಎಚ್ಚರಗೊಳ್ಳಿರಿ ಈ ದೇಶದ ಸಮಸ್ತ ಜನರ ಒಳಿತಿಗಾಗಿ ಹೋರಾಡಿ ಎಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆಯಲ್ಲಿ ಪ್ರಚಾರ ನಡೆಸಿದರು. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೌಡಕಿ ಮಂಜುನಾಥ್, ಸಮಾಜಸೇವಕ ರಂಗಸ್ವಾಮಿ, ಮುಖ್ಯ ಶಿಕ್ಷಕ ಅಭಿಲಾಶ್, ಪತ್ರಕರ್ತ ಬಿ.ಸಿ.ಚನ್ನೇಗೌಡ, ಶಿಕ್ಷಕರಾದ ಗೀತಾ, ಸುನಿರಾ, ಅನಿಷ್ಕಾ, ಸುಚಿತ್ರಾ, ಚೈತ್ರಾ, ಸ್ವಾಮಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net