ದೇಶದ ಅಭಿವೃದ್ಧಿಗೆ ನಮೋ ಅಗತ್ಯ

CLK SULIBELE 13
Published on

ಚಳ್ಳಕೆರೆ: ವಿಶ್ವಕ್ಕೆ ಮಾದರಿಯಾಗಿ ಭಾರತ ಅಭಿವೃದ್ಧಿ ದೇಶವಾಗಿ ಬೆಳೆಯಲು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಯಲ್ಲಿ ಮಾತನಾಡಿ, ದೇಶದ ಹಿತ ಬಯಸದ 28 ಪಕ್ಷಗಳು ಮೋದಿ ವಿರುದ್ಧ ಒಗ್ಗೂಡುವ ಪ್ರಯತ್ನ ನಡೆಸಿವೆ ಎಂದು ದೂರಿದರು.

ರಾಜ್ಯ ಸರ್ಕಾರ ಜನ ವಿರೋಧಿಯಾಗಿ ಆಡಳಿತ ಮಾಡುತ್ತಿದೆ. ಚುನಾವಣಾ ಪೂರ್ವದಲ್ಲಿ ಗ್ಯಾರಂಟಿಗಳ ಯೋಜನೆಯಿಂದ ಮತ ಪಡೆದಿರುವ ಸರ್ಕಾರ ಯೋಜನೆಗಳ ಜಾರಿಯಲ್ಲಿ ಜನರಿಗೆ ನ್ಯಾಯ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಡಾ.ಡಿ.ಎನ್.ಮಂಜುನಾಥ, ಜಿ.ಪಿ.ಜಯಪಾಲಯ್ಯ, ಲಕ್ಷ್ಮೀಶ್ರೀವತ್ಸ, ಬಾಳೆಕಾಯಿ ರಾಮದಾಸ್, ಬಿ.ಎಸ್. ಶಿವಪುತ್ರಪ್ಪ, ಮಂಜು, ಉಮೇಶ್, ಮಹಾಂತೇಶ, ಯತೀಶ್, ಮಾತೃಶ್ರೀ ಮಂಜುನಾಥ, ಜ್ಯೋತಿ, ಜಗದಾಂಬಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net