ದೇಶದ ಅಭಿವೃದ್ಧಿಗಾಗಿ ನಮೋ ಗೆಲ್ಲಿಸಿ

IMG_20231007_141547 (1)
Published on

ಹುಲಸೂರು: ಲೋಕಸಭೆ ಚುನಾವಣೆಯಲ್ಲಿ ಲೋಕಸಭೆ ಅಭ್ಯರ್ಥಿ ಯಾರೇ ಇರಲಿ ನರೇಂದ್ರ ಮೋದಿ ಎಂದು ತಿಳಿದು, ದೇಶದ ಅಭಿವೃದ್ಧಿಗಾಗಿ ಮತ ನೀಡಿ, ಮೋದಿ ಅವರನ್ನು ಗೆಲ್ಲಿಸಬೇಕು. ರಾಜ್ಯದ ಹಿಂದೂ ವಿರೋಧಿ ಸರ್ಕಾರವನ್ನು ಧಿಕ್ಕರಿಸಬೇಕು ಎಂದು ನಮೋ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ತೋಗಲೂರದಲ್ಲಿ ನಮೋ ಬ್ರಿಗೇಡ್‌ನಿಂದ ಶನಿವಾರ ಆಯೋಜಿಸಿದ್ದ ಜನಗಣ ಮನ ಬೈಕ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ದಶಕದಿಂದ ನೆನೆಗುದಿಗೆ ಬಿದ್ದಿದ್ದ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾಶೀ ಕಾರಿಡಾರ್ ನಿರ್ಮಿಸಿ, ಹಿಂದು ಧರ್ಮಕ್ಕೆ ಗೌರವ ತಂದಿದ್ದಾರೆ ಎಂದು ಹೇಳಿದರು.

ಕೆಲ ವರ್ಷದ ಹಿಂದೆ ನಾವು ಹಿಂದು ಹೇಳಲು ಭೀತಿ ಇತ್ತು. ಆದರೆ ನರೇಂದ್ರ ಮೋದಿ ಅವರು ಹಿಂದುಪರ ಅಭಿವೃದ್ಧಿ ಕೆಲಸ ಮಾಡಿದ್ದರಿಂದ ನಾವಷ್ಟೇ ಅಲ್ಲ ಇಂಗ್ಲೆಂಡಿನ ಪ್ರಧಾನಿಯೂ ಗೌರವದಿಂದ ಹಿಂದು ಎಂದು ಹೇಳಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರಿಗೂ ಆಯುಷ್ಮಾನ್ ಭಾರತ್ ಕಾರ್ಡ್ ನೀಡಿ, ಐದು ಲಕ್ಷ ರೂ.ವರೆಗೆ ಚಿಕಿತ್ಸೆ ವೆಚ್ಚ ಭರಿಸಲಾಗುತ್ತಿದೆ. ಪ್ರತಿ ಮನೆಗೆ ಗ್ಯಾಸ್ ನೀಡಿದ್ದಾರೆ. ವರ್ಷದಲ್ಲಿ ೧೦ ಸಾವಿರ ರೂ. ನೀಡುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ಸಹಾಯಧನ ಕಟ್ ಮಾಡಿದೆ ಎಂದರು.

ಕೋವಿಡ್ ಸಂಕಷ್ಟದಲ್ಲಿ ನರೇಂದ್ರ ಮೋದಿ ದೇಶದ ಜನರ ಪ್ರಾಣ ಉಳಿಸಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಲ್ಲಿ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂದರು.

ಶಾಸಕ ಶರಣು ಸಲಗರ, ರಾಜಕುಮಾರ ಸಿರಗಾಪುರ, ರಮೇಶ ಧಬಾಲೆ, ರವಿ ನಾವದಗೀಕರ್, ವೆಂಕಟ ರಾಜೋಳೆ, ಕಾಶಪ್ಪ ಬಿರಾದಾರ, ಬಂಡೆಪ್ಪ ಮಂಠಾಳೆ, ಪ್ರದೀಪ ಬಿರಾದಾರ, ಸಂತೋಷ ಧಬಾಲೆ ಇತರರಿದ್ದರು.

ಐತಿಹಾಸಿಕ ಗ್ರಾಮ ಗೋರ್ಟಾ (ಬಿ)ಕ್ಕೆ ಭೇಟಿ: ಗ್ರಾಮದ ಲಕ್ಷ್ಮೀ ದೇವಸ್ಥಾನದಿಂದ ಸರ್ದಾರ್ ವಲ್ಲಭಾಯಿ ಪಟೇಲ್ ಸ್ಮಾರಕದವರೆಗೆ ಭವ್ಯ ಬೈಕ್ ರ‍್ಯಾಲಿ ನಡೆಸಲಾಯಿತು. ಪ್ರಮುಖರಾದ ಶ್ರೀ ಪ್ರಭು ದೇವರು, ಸುಭಾಷ ಪತಂಗೆ, ಬಾಬುರಾವ ರಾಜೋಳೆ , ಚಂದ್ರಕಾಂತ ಕಣಜೆ, ಮಹೇಶ ಪಟ್ನೆ, ಬಸವರಾಜ ಪೊಲೀಸ್ ಪಾಟೀಲ್, ಚನ್ನಬಸಪ್ಪ ರಾಜೋಳೆ, ರುದ್ರಮಣಿ ಮಠಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net