ದೇಶದ ಅಭಿವೃದ್ದಿಗೆ ದಿಕ್ಸೂಚಿ

bkt-18-1
ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿರುವ ಆರೋಗ್ಯ ಇಲಾಖೆಯ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಿ.ಎಸ್.ಕೋಟಿ, ರಾಜೇಶ ದೊಡಮನಿ ಅವರನ್ನು ಸನ್ಮಾನಿಸಲಾಯಿತು.
Published on

ಬಾಗಲಕೋಟೆ: ವ್ಯಕ್ತಿ, ಸಮಾಜ ಹಾಗೂ ದೇಶದ ಬೆಳವಣಿಗೆಯಲ್ಲಿ ಸಂಖ್ಯಾಶಾಸ್ತç ದಿಕ್ಸೂಚಿಯಾಗಿದೆ ಎಂದು ಜಮಖಂಡಿ ಬಿ.ಎಲ್.ಡಿ.ಎ ಸಂಸ್ಥೆಯ ಅರ್ಥಶಾಸ್ತç ವಿಭಾಗದ ಪ್ರಾದ್ಯಾಪಕ ಡಾ.ವಿ.ಎಸ್.ಕುಲಕರ್ಣಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ಆರೋಗ್ಯ ಇಲಾಖೆಯ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾ ಸಂಖ್ಯಾ ಸಂಗ್ರಹಣಾಽಕಾರಿಗಳ ಕಾರ್ಯಾಲಯದ ವತಿಯಿಂದ ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಆಚರಿಸಲ್ಪಡುವ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಮನುಷ್ಯ ಹುಟ್ಟಿನಿಂದ ಮರಣದ ವರೆಗೆ ಹಾಗೂ ಪ್ರತಿ ಅಡುಗೆ ಮನೆಯಿಂದ ದೇಶದ ಆರ್ಥಿಕ ವ್ಯವಸ್ಥೆವರೆಗೆ ಸಂಖ್ಯಾಶಾಸ್ತç ಅಮೂಲ್ಯ ಪಾತ್ರ ವಹಿಸುತ್ತದೆ ಎಂದರು.

ಈಚೆಗೆ ಗುಜರಾತನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಕಣ್ಣಿಗೆ ಬರುವುದು ಮರಣ ಸಂಖ್ಯೆಯಾಗಿದ್ದು, ಜೀವನದಲ್ಲಿ ಧನಾತ್ಮಕವಾಗಲಿ, ಋಣಾತ್ಮಕವಾಗಲಿ ಪ್ರತಿಯೊಂದಕ್ಕೂ ಸಂಖ್ಯಾಶಾಸ್ತçದ ಅವಲಂಬಿತವಾಗಿದೆ. ಆಸ್ಪತ್ರೆಯಲ್ಲಿ ೧೦ ಎಂ.ಎಲ್ ರಕ್ತದ ಮೇಲೆ ನಮ್ಮ ದೇಹವನ್ನು ಅಳೆಯುತ್ತಾರೆ. ಪ್ರತಿಯೊಂದು ಹಂತದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕೋವಿಡ್ ಸಮಯದಲ್ಲಿ ಹಿರಿಯರು ಹಾಗೂ ಕಿರಿಯರನ್ನು ಕಳೆದುಕೊಂಡಿದ್ದೇವೆ. ಇಂತಹ ಸಮಯದಲ್ಲಿ ವ್ಯಾಕ್ಸಿನ್ ಕೊಡುವ ಸಂದರ್ಭ ಬಂದಾಗಿ ೬೫ ವರ್ಷ ಮೆಲ್ಪಟ್ಟ ಜನರಿಗೆ ಕೊಡಲಾಗುತ್ತಿ. ಆ ಜನ ಕೇವಲ ಶೇ.೨೭ ರಷ್ಟು ಇತ್ತು. ಈ ಮಾಹಿತಿ ದೊರೆತಿದ್ದು, ಸಂಖ್ಯಾಶಾಸ್ತçದಿAದ ಎಂದರು.

ಪ್ರತಿಯೊAದು ಸಂಖ್ಯಾಶಾಸ್ತç ಬೇರೆ ಬೇರೆ ಸಂದರ್ಭಗಳಲ್ಲಿ ಬಳಸುವಾಗ ಒಂದು ನಿಽðಷ್ಟತೆ ಇದ್ದು, ಯಾವುದನ್ನು ಎಲ್ಲಿ ಬಳಸಿದರೆ ಸೂಕ್ತ ಎಂಬುದನ್ನು ಅರಿಯಬೇಕಿದೆ. ಒಂದು ದತ್ತಾಂಶ ಬೇರೆ ಬೇರೆ ದತ್ತಾಂಶದ ಮೇಲೆ ಅವಲಂಬನೆಯಾಗುತ್ತದೆ. ದತ್ತಾಂಶಗಳ ನಿಖರತೆಯನ್ನು ಸ್ಪಷ್ಟವಾಗಿ ತಿಳಿದಿದ್ದೆ, ಆದರೆ ದತ್ತಾಂಶಗಳ ಪ್ರಮುಖತೆ ಹಾಗೂ ಬಳಕೆ ಅತ್ಯಂತ ಶುಭಕಾರಿಯಾಗಿರುತ್ತದೆ. ಒಂದು ವೇಳೆ ದತ್ತಾಂಶಗಳನ್ನು ಪ್ರತ್ಯೇಕವಾಗಿ ತೆಗೆದುಕೊಂಡರೆ ಹಾನಿಕಾರ ಆಗುವ ಸಾಧ್ಯತೆ ಇರುತ್ತದೆ. ಕಾರ್ಯಕ್ರಮ ಇರಬಹುದು, ಯೋಜನೆ, ತಯಾರಿ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟಿ ಮಾತನಾಡಿ, ದೇಶ ಪ್ರಗತಿ ಹೊಂದಬೇಕಾದರೆ ಸಂಖ್ಯಾಶಾಸ್ತç ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಂದು ಇಲಾಖೆಯಲ್ಲಿ ಸಂಖ್ಯಾ ಪಿತಾಮಹ ಇದ್ದಾರೆ. ಪ್ರತಿಯೊಂದು ಯೋಜನೆಗಳನ್ನು ಅಂಕಿ ಸಂಖ್ಯೆ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ತೋಟಗಾರಿಕೆ ಮತ್ತು ಕೃಷಿಗೆ ಸಂಬAಽಸಿದ ಮಾಹಿತಿ ಕಲೆ ಹಾಕಲಾಗುತ್ತದೆ. ಪ್ರತಿಯೊಂದು ವ್ಯವಸ್ಥೆಯಲ್ಲಿ ಅಂಕಿ ಅಂಶಗಳು ಬಹಳ ಮುಖ್ಯವಾಗಿವೆ ಎಂದರು.

ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಅವರು ಪ್ರಾರಂಭದಲ್ಲಿ ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾರಂಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಽಕಾರಿ ಜಿ.ಪಿ.ಸುಂಕದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ÷್ಮಣ ಕಳ್ಳೇನ್ನವರ, ಜಿಲ್ಲಾ ಪಂಚಾಯಿತಿ ನಿವೃತ್ತ ಯೋಜನಾ ಅಂದಾಜು ಮತ್ತು ಮೌಲ್ಯಮಾಪಣಾಽಕಾರಿ ಎಂ.ಆರ್.ಬಾಡಗಿ, ನಿವೃತ್ತ ಸಹಾಯಕ ಸಾಂಖ್ಯಿಕ ಅಽಕಾರಿ ಎಂ.ಎಸ್.ಘಟನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net