ದೇಶಕ್ಕೆ ಜ್ಞಾನ ನೀಡುವಾತ ಗುರು

10ydg02
Published on

ಯಾದಗಿರಿ: ತಾನು ಸಂಪಾದಿಸಿರುವ ಜ್ಞಾನವನ್ನು ವಿದ್ಯಾಥರ್ಿಗಳಿಗೆ ಧಾರೆ ಎರೆಯುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕರು ಸದಾ ಮನಕುಲದ ಒಳಿತನ್ನು ಬಯಸುತ್ತಾರೆ ಎಂದು ಏಕದಂಡಗಿ ವಿಶ್ವಕರ್ಮ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ನುಡಿದರು.

ಭಾನುವಾರ ಇಲ್ಲಿನ ಜಿಲ್ಲಾ ಕಸಾಪ ಭವನದಲ್ಲಿ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಶಿಕ್ಷಕರ ದಿನ, ಕವಿಗೋಷ್ಠಿ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ದೇಶಕ್ಕೆ ರೈತ ಅನ್ನ ನೀಡಿದರೆ, ಸೈನಿಕ ರಕ್ಷಣೆ ಕೊಡುತ್ತಾನೆ. ಅದರಂತೆ ಶಿಕ್ಷಕ ಜ್ಞಾನ ನೀಡುತ್ತಾನೆ. ಹೀಗಾಗಿ ಈ ಮೂರು ಜನ ಪ್ರಾಥಃಸ್ಮರಣಿಯರು ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಚಾರ್ಯ ಎಸ್.ಎಸ್.ಹಾಬಾಳ್ಕರ್, ಒಂದು ಕಲ್ಲು ಶಿಲ್ಪಿಯ ಕೈಗೆ ಸಿಕ್ಕಾಗ ಯಾವ ರೀತಿ ಮೂತರ್ಿಯಾಗಿ ದೇವಾಲಯದಲ್ಲಿ ಜನರಿಂದ ಪೂಜಿಸಲ್ಪಡುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳಬೇಕಾದರೆ ಶಿಕ್ಷಕ ಎಂಬ ಶಿಲ್ಪಿ ಬೇಕಾಗುತ್ತದೆ ಎಂದರು.

ಶಿಕ್ಷಕರಾದ ಸಾಯಪ್ಪ, ಸಿದ್ದಪ್ಪ ಮುಷ್ಟೂರ್, ಕವಿತಾ, ಸಾಹೇಬಗೌಡ ಬಿರಾದಾರ್, ರತ್ನಕ್ಕ, ಈಶ್ವರ್, ಅನ್ನಪೂರ್ಣ, ಮಹಾಂತಪ್ಪ ಜಾಗಟೆ, ಗುರುಪ್ರಸಾದ್ ವೈದ್ಯ ಕವನ ವಾಚಿಸಿದರು. ಇದೇ ವೇಳೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮಲ್ಲಿಕಾಜರ್ುನ್ ಸಾಹೇಬ್ ಗೌಡ ಬಿರಾದರ್ ಚಂದ್ ಸಾಬ್ ಗುಲಾಂ ಆಫೀಜ್ ಪಟೇಲ್ ಈಶ್ವರ ಷಣ್ಮುಖಪ್ಪ ಮಲ್ಲಪ್ಪ ರತ್ನಕ್ಕ ಮೀನಾಕ್ಷಿ, ಭೀಮನ ಗೌಡ ಅವರನ್ನು ಪರಿಷತ್ತಿನ ವತಿಯಿಂದ ಶಾಲು ಫಲ ಪುಷ್ಪ ತಾಂಬೂಲಗಳಿಂದ ವಿಶೇಷವಾಗಿ ಸತ್ಕರಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಿಶ್ವನಾಥ ಕಲರ್ಿ, ಡಾ.ಸುಭಾಶ್ಚಂದ್ರ ಕೌಲಗಿ, ತಾಲೂಕಾಧ್ಯಕ್ಷ ವೆಂಕಟೇಶ ಕಲಕಂಬ, ಬಸವರಾಜ ಮೋಟ್ನಳ್ಳಿ, ದೇವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net