ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅನನ್ಯ

Ambedkar
Published on

ಚಿತ್ರದುರ್ಗ: ದೇಶಕ್ಕೆ ಮಹತ್ತರವಾದ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ ಅನನ್ಯ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.

ತುರುವನೂರು ಹೋಬಳಿಯ ಕೂನಬೇವು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್ಸಿ, ಎಸ್ಟಿ ಒಳಗೊಂಡು ಹಿಂದುಳಿದ ಸಮುದಾಯದವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದರ ಫಲ ಅನೇಕರು ಶಿಕ್ಷಣ ಪಡೆದು ವಿವಿಧ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ರಾಜಕೀಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಸರ್ವರೂ ಸಮಾನರು ಎಂಬ ಮಾನವೀಯ ಮೌಲ್ಯ ಎತ್ತಿಹಿಡಿದ ಮಹಾ ಮಾನವತವಾದಿ ಎಂದು ಬಣ್ಣಿಸಿದರು.

ಸಿದ್ಧಾರೂಢ ಆಶ್ರಮದ ಶ್ರೀ ಮಹಾಲಿಂಗಪ್ಪ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೆಪಿಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಸಂಘದ ಅಧ್ಯಕ್ಷ ಗಂಟೆ ಈಶ್ವರಪ್ಪ, ಉಪಾಧ್ಯಕ್ಷ ಪಿ.ಚಂದ್ರಪ್ಪ, ಕಾರ್ಯದರ್ಶಿ ಹೇಮಣ್ಣ, ಆರ್.ಮಹಾಂತೇಶ್, ತುರುವನೂರು ಗ್ರಾಪಂ ಸದಸ್ಯ ಡಿ.ಆರ್. ಮಂಜುನಾಥ್, ಚೌಳೂರು ಪ್ರಕಾಶ್, ಗ್ರಾಮದ ಮುಖಂಡರಾದ ತಿಪ್ಪೇಸ್ವಾಮಿ, ರಾಜಪ್ಪ, ಹಿರೇಹಳ್ಳಿ ತಿಪ್ಪಯ್ಯ, ಏಕಾಂತಪ್ಪ, ಅನಿತಾ, ಲಕ್ಷ್ಮಿ ಆಚಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net