ದೇಶಕ್ಕಿಂತ ಜಾತಿ-ಧರ್ಮ ದೊಡ್ಡದಾಗಬಾರದು

10..4
ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ವಾರ್ಷಿಕೋತ್ಸವದಲ್ಲಿ ರಬಕವಿಯ ನಿವತ್ತ ಪ್ರಾಚಾರ್ಯ ಎಸ್.ಎಂ.ಶೇಖ ಮಾತನಾಡಿದರು.
Published on

ಮೂಡಲಗಿ: ಜಾತಿ ಮತ್ತು ಧರ್ಮಗಳು ನಮ್ಮ ದೇಶ ಅಥವಾ ಸಮಾಜಕ್ಕಿಂತ ದೊಡ್ಡದಾಗಬಾರದು, ದೊಡ್ಡದಾಗಲು ಬಿಡಬಾರದು ಎಂದು ರಬಕವಿಯ ನಿವತ್ತ ಪ್ರಾಚಾರ್ಯ ಎಸ್.ಎಂ.ಶೇಖ ಹೇಳಿದರು.

ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಕೇವಲ ಅಕ್ಷರಜ್ಞಾನವುಳ್ಳ ಶಿಕ್ಷಣ ಪಡೆಯದೆ ನೈತಿಕತೆ, ಮಾನವೀಯ ವೌಲ್ಯಗಳುಳ್ಳ ವಿದ್ಯಾವಂತರಾಗಿ ಎಂದರು.

ಸಿಪಿಐ ಶ್ರೀಶೆಲ ಬ್ಯಾಕೂಡ ಮಾತನಾಡಿ, ವಿದ್ಯಾರ್ಥಿಗಳು ಯುಪಿಎಸ್‌ಸಿ, ಕೆಪಿಎಸ್‌ಸಿಯಂತಹ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕಾದರೆ ತ್ಯಾಗ, ಸಮಯ ಪ್ರಜ್ಞೆ, ಪರಿಶ್ರಮ ಹಾಗೂ ಬದ್ಧತೆ ಬಹಳ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಕ್ರೀಡಾ ಸಾಧನೆ ಮಾಡಿದ ಸಿಪಿಐ ಶ್ರೀಶೆಲ ಬ್ಯಾಕೂಡ, ನಿವೃತ್ತ ಪ್ರಾಚಾರ್ಯ ಎ.ಪಿ.ರಡ್ಡಿ, ನಿವತ್ತ ಉಪನ್ಯಾಸಕ ಎಸ್.ಜಿ.ನಾಯಿಕ, ಡಾ.ಬಿ.ಸಿ.ಪಾಟೀಲ ಹಾಗೂ ವಿದ್ಯಾರ್ಥಿಗಳಾದ ಬಾಲಕಷ್ಣ ಕಮಾಲ, ಸ್ನೇಹಾ ಮೆಳವಂಕಿ, ಪ್ರವೀಣ ಪಾಟೀಲ, ಜ್ಯೋತಿ ದಾನಪ್ಪಗೋಳ ಅವರನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ಸತ್ಕರಿಸಲಾಯಿತು.

ಶಿಕ್ಷಣ ಸಂಸ್ಥೆಯ ನಿರ್ದೇಶಕ ವಿ.ಐ.ಸತರಡ್ಡಿ, ಪ್ರಾಚಾರ್ಯ ಸಂಗಮೇಶ ಗುಜಗೊಂಡ, ಡಾ.ಎಸ್.ಎಲ್.ಚಿತ್ರಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net